ಭೋಪಾಲ್: ವ್ಯಾಪಮ್ ಹಗರಣದ ಆರೋಪಿಗಳಾಗಿರುವ ಐವರು ಗ್ವಾಲಿಯರ್ ಮೂಲದ ವಿದ್ಯಾರ್ಥಿಗಳು ರಾಷ್ಟ್ರಪತಿಗಳಿಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದಾರೆ. ನಮ್ಮ ಘನತೆಯನ್ನು ಕಾಪಾಡಿ ಅಥವಾ ಬದುಕನ್ನು ಕೊನೆಗೊಳಿಸಲು ಬಿಡಿ ಎಂದು ಅಂಗಲಾಚಿದ್ದಾರೆ.
ಮನೀಶ್ ಶರ್ಮಾ, ರಾಘವೇಂದ್ರ ಸಿಂಗ್, ಪಂಕಜ್ ಬನ್ಸಾಲ್, ಅಮಿತ್ ಚಡ್ಡಾ, ವಿಕಾಸ್ ಗುಪ್ತಾ ಈ ಮನವಿ ಮಾಡಿದವರಾಗಿದ್ದು, ವ್ಯಾಪಮ್ ಪ್ರಿ-ಮೆಡಿಕಲ್ ಎಂಟ್ರೆನ್ಸ್ ಎಕ್ಸಾಂನಲ್ಲಿ ವಂಚನೆ ನಡೆಸಿ ಪಾಸಾದ ಆರೋಪ ಇವರ ಮೇಲಿದೆ.
ವಿಶೇಷ ತನಿಖಾ ತಂಡ ನಮ್ಮ ಮೇಲಿನ ಆರೋಪವನ್ನು ವಜಾಗೊಳಿಸಿದೆ, ಆದರೂ ಕಾಲೇಜು ಮಂಡಳಿ ನಮಗೆ ಕಿರುಕುಳ ನೀಡುತ್ತಿದೆ. ಗಜ್ರ ರಾಜ ಮೆಡಿಕಲ್ ಕಾಲೇಜು ನಮ್ಮ ಬದುಕನ್ನು ನರಕವನ್ನಾಗಿಸಿದೆ ಎಂದು ಈ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹೀಗಾಗಿ ನಮ್ಮ ಘನತೆಯನ್ನು ಕಾಪಾಡಿ, ಇಲ್ಲವೇ ನಮ್ಮನ್ನು ಸಾಯಲು ಬಿಡಿ ಎಂದು ಇವರು ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸುಮಾರು 3 ಸಾವಿರ ವಿದ್ಯಾರ್ಥಿಗಳ ಮೇಲೆ ವ್ಯಾಪಂ ಹಗರಣದ ಆರೋಪವಿದ್ದು, 2013 ರಿಂದ ಇವರ ವಿರುದ್ಧ ತನಿಖೆ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.