ನವದೆಹಲಿ: COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸಹಾಯ ಮಾಡಲು ನರ್ಸ್ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಗುಂಪನ್ನು ಕಳುಹಿಸಲು ಭಾರತ ನಿರ್ಧರಿಸಿದೆ. ಅಂತಹ 88 ನರ್ಸ್ಗಳ ಮೊದಲ ಬ್ಯಾಚ್ ಮೇ 9 ರಂದು ಅಲ್ಲಿಗೆ ಬಂದಿಳಿದಿದೆ ಎಂದು ಮೂಲಗಳು ವರದಿ ಮಾಡಿವೆ.
ಯುಎಇಯಲ್ಲಿ ಸಾಂಕ್ರಾಮಿಕ ರೋಗದ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 17,417 ಕ್ಕೆ ಏರಿದೆ. ಈ ಪೈಕಿ ಶನಿವಾರವಷ್ಟೇ 624 ಹೊಸ ಪ್ರಕರಣಗಳು ವರದಿಯಾಗಿವೆ. ಈ ನಡುವೆ, ಯುಎಇಯಲ್ಲಿ ಶನಿವಾರ 11 ಹೊಸ COVID-19 ಸಾವುಗಳು ಸಂಭವಿಸಿವೆ, ಇಲ್ಲಿಯವರೆಗೆ ಸಾವಿನ ಸಂಖ್ಯೆ 185ಕ್ಕೆ ತಲುಪಿದೆ.
ನರ್ಸ್ಗಳು ಯುಎಇಯಲ್ಲಿ 14 ದಿನಗಳ ಕ್ಯಾರೆಂಟೈನ್ನಲ್ಲಿ ಉಳಿಯಲಿದ್ದಾರೆ, ನಂತರ ಇವರನ್ನು ಹುದ್ದೆಯ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಆಸ್ಪತ್ರೆಗಳಿಗೆ ನಿಯೋಜಿಸಲಾಗುತ್ತದೆ.
ಎಲ್ಲಾ ನರ್ಸ್ಗಳು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಆಸ್ಟರ್ ಡಿಎಂ ಹೆಲ್ತ್ಕೇರ್ ಆಸ್ಪತ್ರೆಗಳಿಂದ ಬಂದವರು ಎಂಬುದು ಗಮನಾರ್ಹ.
ಅಭಿವೃದ್ಧಿಯನ್ನು ಶ್ಲಾಘಿಸಿದ ದುಬೈ ಆರೋಗ್ಯ ಪ್ರಾಧಿಕಾರದ ಮಹಾನಿರ್ದೇಶಕ ಹುಮೈದ್ ಅಲ್ ಕುತಾಮಿ ಅವರು, ಇದನ್ನು ಉಭಯ ರಾಷ್ಟ್ರಗಳು ಹಂಚಿಕೊಂಡ ಸಂಬಂಧದ ಸಾಕ್ಷಿಯಾಗಿದೆ ಎಂದಿದ್ದಾರೆ.
ಯುಎಇಯ ಭಾರತ ರಾಯಭಾರಿ ಪವನ್ ಕಪೂರ್, ಈ ಅಭಿವೃದ್ಧಿಯು ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.