ಇಸ್ರೇಲ್ : ಮೇ 7 ರಂದು ಭಾರತದ ಹೆಮ್ಮೆ ರವೀಂದ್ರನಾಥ ಠಾಗೋರ್ ಅವರ 159 ನೇ ಜನ್ಮದಿನವನ್ನು ಇಡೀ ಜಗತ್ತು ಆಚರಿಸಿತ್ತು. ಠಾಗೋರ್ ಅವರ ಇತಿಹಾಸದ ಅತ್ಯಂತ ಹೆಗ್ಗುರುತು ಎಂದರೆ, ಅವರು ಭಾರತ ಮತ್ತು ಬಾಂಗ್ಲಾದೇಶ ಎರಡರ ರಾಷ್ಟ್ರಗೀತೆಯನ್ನೂ ಬರೆದವರು.
ಅವರು ಭಾರತ ಮತ್ತು ನೆರೆಯ ರಾಷ್ಟ್ರಗಳ ಬಗ್ಗೆ ಮಾತ್ರವಲ್ಲ, ಪ್ರಪಂಚದಾದ್ಯಂತ ಒಂದು ಛಾಪು ಮೂಡಿಸಿದವರು. ಇದಕ್ಕೆ ಉದಾಹರಣೆಯೆಂದರೆ, ಇಸ್ರೇಲ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರ ಹೆಸರನ್ನು ತನ್ನ ರಸ್ತೆಗೆ ಹೆಸರಿಸಿದ್ದು, ಈ ಮೂಲಕ ಅವರಿಗೆ ಗೌರವವನ್ನು ನೀಡಿದ್ದು.
ರವೀಂದ್ರನಾಥ ಠಾಗೋರ್ ಅವರ ಹೆಸರಿನ ರಸ್ತೆ ಟೆಲ್ ಅವೀವ್ನಲ್ಲಿದೆ. ‘ನಾವು ಇಂದು ಮತ್ತು ಪ್ರತಿದಿನ ರವೀಂದ್ರನಾಥ ಠಾಗೋರ್ರನ್ನು ಗೌರವಿಸುತ್ತೇವೆ, ಮಾನವಕುಲಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ನಾವು ಟೆಲ್ ಅವೀವ್ನಲ್ಲಿ ರಸ್ತೆಗೆ ಅವರ ಹೆಸರಿಟ್ಟಿದ್ದೇವೆ’ ಎಂಬ ಶೀರ್ಷಿಕೆಯೊಂದಿಗೆ ಈ ಮಾಹಿತಿಯನ್ನು ಇಸ್ರೇಲ್ನ ಅಧಿಕೃತ ಹ್ಯಾಂಡಲ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
We honor #RabindranathTagore today and every day, as we named a street in Tel Aviv in memory of his valuable contribution to mankind. pic.twitter.com/ZH826Ot0aP
— Israel in India (@IsraelinIndia) May 7, 2020
ಕವಿಯ ಜನ್ಮ ದಿನಾಚರಣೆಯ ನೆನಪಿಗಾಗಿ ರಸ್ತೆಗೆ ಹೆಸರಿಸಲಾಗಿದೆ.
ರವೀಂದ್ರನಾಥ ಠಾಗೋರ್ ಹೆಸರಾಂತ ಬರಹಗಾರ ಮತ್ತು ಕವಿ, ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಪ್ರತಿರೋಧದ ಬಲವಾದ ಧ್ವನಿಯಾಗಿ ಕಲೆಯನ್ನು ಬಳಸಿಕೊಂಡರು. ಬ್ರಿಟಿಷರು ಅವರಿಗೆ ನೈಟ್ಹುಡ್ ನೀಡಿದಾಗ ಅವರು ಅದನ್ನು ನಿರಾಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.