ನವದೆಹಲಿ: ಪರಾಕ್ರಮಕ್ಕೆ ಹೆಸರಾಗಿರುವ ಮೇವಾಡದ ರಾಜ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಮಹಾನ್ ವೀರನಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಿದ್ದಾರೆ.
“ಭಾರತಮಾತೆಯ ಮಹಾನ್ ಸುಪುತ್ರ ಮಹಾರಾಣಾ ಪ್ರತಾಪ್ ಅವರಿಗೆ ಜಯಂತಿಯಂದು ಕೋಟಿ ಕೋಟಿ ನಮನ. ದೇಶಪ್ರೇಮ, ಸ್ವಾಭಿಮಾನ ಮತ್ತು ಪರಾಕ್ರಮದಿಂದ ಕೂಡಿದ ಅವರ ಕಥೆ ದೇಶವಾಸಿಗಳಿಗೆ ಸದಾ ಪ್ರೇರಣಾದಾಯಿಯಾಗಿದೆ” ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.
भारत माता के महान सपूत महाराणा प्रताप को उनकी जयंती पर कोटि-कोटि नमन। देशप्रेम, स्वाभिमान और पराक्रम से भरी उनकी गाथा देशवासियों के लिए सदैव प्रेरणास्रोत बनी रहेगी।
— Narendra Modi (@narendramodi) May 9, 2020
ದೇಶ, ಧರ್ಮ ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ವೀರ ಮಹಾರಾಣಾ ಪ್ರತಾಪ್.
ಮೇವಾಡದ ರಾಜನಾಗಿದ್ದ ಮಹಾರಾಣಾ ಪ್ರತಾಪ್, ಮೊಘಲರ ವಿರುದ್ಧ ಪರಾಕ್ರಮದಿಂದ ಹೋರಾಟ ನಡೆಸಿದ ಕಾರಣಕ್ಕಾಗಿ ಇಂದಿಗೂ ಭಾರತೀಯರ ಜನಮಾನಸದಲ್ಲಿ ಅಜರಾಮರನಾಗಿ ಉಳಿದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.