ನವದೆಹಲಿ: ಹಾಲು ಮಾರಾಟಗಾರ ವ್ಯಾಪಾರ ಸಂದರ್ಭದಲ್ಲಿ ಕೊರೋನಾ ಹರಡದಂತೆ ಮಾಡಿಕೊಂಡ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ತನ್ನ ಮೋಟಾರ್ ಬೈಕ್ ನಲ್ಲಿ ಕಟ್ಟಿಕೊಂಡಿರುವ ಹಾಲಿನ ಕ್ಯಾನ್ಗಳಿಗೆ ಪೈಪ್ ಕನೆಕ್ಷನ್ ನೀಡಿ, ಅದರ ಮೂಲಕವೇ ಹಾಲು ವಿತರಣೆ ನಡೆಸುತ್ತಿರುವ ಈತನ ಕಾರ್ಯ ವೈಖರಿಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
ಕೊರೋನಾ ವೈರಸ್ ದೇಶವನ್ನೇ ಕಂಗೆಡಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಅನೇಕ ನಿಯಂತ್ರಣ ನಿಯಮಗಳನ್ನು, ಲಾಕ್ಡೌನ್ ಕ್ರಮವನ್ನು ಜಾರಿಗೆ ತಂದಿತ್ತು. ಸಾಮಾಜಿಕ ಅಂತರ ಕಾಪಾಡುವಂತೆ, ಮಾಸ್ಕ್ ಧರಿಸುವ ಮೂಲಕ ಕೊರೋನಾದಿಂದ ರಕ್ಷಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಆದೇಶವನ್ನು ತನ್ನ ದೈನಂದಿನ ವ್ಯಾಪಾರ ಚಟುವಟಿಕೆಯಲ್ಲಿಯೂ ಆರಂಭಿಸಿರುವ ಈ ವ್ಯಕ್ತಿ, ಮಾಸ್ಕ್ ಧರಿಸಿಕೊಂಡು, ಅಂತರ ಕಾಯ್ದುಕೊಳ್ಳುವ ಮೂಲಕ ಪೈಪ್ ಸಹಾಯದಿಂದಲೇ ಗ್ರಾಹಕರಿಗೆ ಹಾಲು ವಿತರಣೆ ಮಾಡುತ್ತಿದ್ದಾನೆ.
ಈ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ ಎಂಬವರು, ಈ ಮಾದರಿ ಕಾರ್ಯವನ್ನು ನೆಟ್ಟಿಗರ ಮುಂದಿಟ್ಟಿದ್ದಾರೆ. ತನ್ನ ಸಾಮಾನ್ಯ ಜ್ಞಾನವನ್ನು ಬಳಸಿ, ಹೀಗೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಈ ಹಾಲು ವ್ಯಾಪಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.
Good to see that some people go extra mile to keep themselves and others safe.
Let’s do basic minimum things of staying at home, wearing mask and keeping social distance even if we cannot go an extra mile like this innovative milkman. pic.twitter.com/RrjYVtdaKW
— Nitin Sangwan, IAS (@nitinsangwan) May 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.