ಜೈಪುರ: ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವಂತೆ ಉದಯಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 18 ಆನ್ಲೈನ್ ನಿರ್ವಹಣಾ ಕೋರ್ಸ್ಗಳನ್ನು ತನ್ನ ವರ್ಚುವಲ್ ಲರ್ನಿಂಗ್ ಫ್ಲ್ಯಾಟ್ಫಾರ್ಮ್ನಲ್ಲಿ ಆರಂಭಿಸಿದೆ.
2019-21 ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗುವಂತೆ ಈ ಕೋರ್ಸ್ಗಳನ್ನು ಸಂಸ್ಥೆ ಆರಂಭಿಸಿದೆ. ಇದರಲ್ಲಿ ಮಾರ್ಕೆಟಿಂಗ್, ಫೈನಾನ್ಸ್, ಅನಾಲಿಟಿಕ್ಸ್, ಎಚ್ ಆರ್ ಸೇರಿದಂತೆ 18 ವಿಧದ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗಿ ಸಂಸ್ಥೆ ಆರಂಭ ಮಾಡಿರುವುದಾಗಿ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ನಿರ್ದೇಶಕ ಜನತ್ ಶಾ ಅವರು, ವಿದ್ಯಾರ್ಥಿಗಳ ತಾತ್ಕಾಲಿಕ ಕಲಿಕೆಗೆ ಪೂರಕವಾಗುವಂತೆ ಈ ಯೋಚನೆಗೆ ಮುಂದಾಗಿದ್ದೇವೆ. ಸಂಸ್ಥೆಯ ಬೋಧಕ ವರ್ಗ ಫಿನ್ಟೆಕ್, ಬ್ಲ್ಯಾಕ್ ಚೇನ್, ಸ್ಟ್ಯಾಟಜಿಕ್ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ಗಳನ್ನು ಆನ್ಲೈನ್ ಮೂಲಕ ಕಲಿಸಿಕೊಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಕೊರೋನಾ ಲಾಕ್ಡೌನ್ ಸಂದರ್ಭವನ್ನು ವಿದ್ಯಾರ್ಥಿಗಳು ಹೆಚ್ಚು ಪರಿಣಾಮಕಾರಿ ಹಾಗೂ ಅರ್ಥಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.