ನವದೆಹಲಿ: ಚೀನಾದಿಂದ ವಿಶ್ವಕ್ಕೇ ಕಂಟಕ ಉಂಟುಮಾಡಿದ ಕೊರೋನಾವೈರಸ್ ವಿರುದ್ಧ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಸಮಯೋಚಿತ ನಿರ್ಧಾರ, ನಿಯಂತ್ರಣ ಕ್ರಮಗಳನ್ನು ಮೆಚ್ಚಿ ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಬ್ಯಾರಿ ಓʼಫಾರೆಲ್ ಅವರು ಮೋದಿ ಅವರನ್ನು ಸೂಪರ್ ಹ್ಯುಮನ್ ಎಂದು ಪ್ರಶಂಸಿಸಿದ್ದಾರೆ.
ಈ ಬಗ್ಗೆ ಡಿಡಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಫೈರಲ್ ಹೇಳಿಕೆ ನೀಡಿದ್ದು, ಜಗತ್ತಿನ ಎರಡನೇ ದೊಡ್ಡ ರಾಷ್ಟ ಭಾರತದಲ್ಲಿ ಸಮಯೋಚಿತ ನಿರ್ಧಾರಗಳ ಜೊತೆಗೆ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಮೋದಿ. ಇವೆಲ್ಲದರ ಜೊತೆಗೆ ವಿದೇಶಗಳ ನಾಯಖರ ಜೊತೆಗೂ ಸಂಕಷ್ಟದ ಬಗ್ಗೆ ಮಾತುಕತೆ ನಡೆಸಲು ಸಮಯ ಮೀಸಲಿಡುತ್ತಾರೆ. ಇವರ ಈ ಮಹತ್ವದ ಕ್ರಮಗಳೇ ಅವರನ್ನು ಸೂಪರ್ ಹ್ಯುಮನ್ ಆಗಿಸಿದೆ ಎಂದು ಶ್ಲಾಘಿಸಿದ್ದಾರೆ.
ಕೊರೋನಾ ಸೋಂಕು ವ್ಯಾಪಿಸದಂತೆ ಆರಂಭದ ಹಂತದಲ್ಲಿಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಇನ್ನಿತರ ನಿಯಂತ್ರಣ ಕ್ರಮಗಳು ಮತ್ತು ಆರ್ಥಿಕತೆಗಿಂತ ದೇಶದ ಜನರ ಆರೋಗ್ಯವೇ ಮುಖ್ಯ ಎಂದು ತಿಳಿದು ಅನುಸರಿಸಿದ ಲಾಕ್ಡೌನ್ ಕ್ರಮಗಳಂತಹ ನಿರ್ಧಾರಕ್ಕೆ ಫಾರೆಲ್ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ಇಂತಹ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವುದು, ದೀಪ ಹಚ್ಚುವಂತಹ ಕಾರ್ಯಕ್ರಮಗಳಿಗೆ ಕರೆ ನೀಡಿ, ಆ ಮೂಲಕ ದೇಶದ ಜನರಲ್ಲಿ ಒಗ್ಗಟ್ಟಾಗಿ ಸೋಂಕಿನ ವಿರುದ್ಧ ಹೋರಾಡುವ ಸಂದೇಶ ನೀಡಿದ ಮೋದಿ ಕ್ರಮವನ್ನು ಅವರು ಮೆಚ್ಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.