ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಗೆ ಮತ್ತೆ ಐದು ರಾಜ್ಯಗಳು ಸೇರ್ಪಡೆಗೊಂಡಿವೆ. ಈ ಮೂಲಕ ಯೋಜನೆಗೆ ಸೇರ್ಪಡೆಗೊಂಡ ಒಟ್ಟು ರಾಜ್ಯಗಳ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಯೋಜನೆಗೆ ಸೇರ್ಪಡೆಗೊಂಡ ಐದು ರಾಜ್ಯಗಳೆಂದರೆ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ದಾಮನ್ ಹಾಗೂ ದಿಯು.
‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಅಡಿಯಲ್ಲಿನ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಆಹಾರಧಾನ್ಯಗಳನ್ನು ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯನ್ನು ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿತ್ತು.
ಈ ವರ್ಷದ ಜನವರಿ 1ರ ವೇಳೆಗೆ 12 ರಾಜ್ಯಗಳು ಯೋಜನೆಗೆ ಒಳಪಟ್ಟಿದ್ದವು. ಈಗ 17 ರಾಜ್ಯಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಏಕೀಕೃತ ನಿರ್ವಹಣೆಯ ಅಡಿಗೆ ಒಳಪಟ್ಟಿದೆ.
“17 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 60 ಕೋಟಿ ಫಲಾನುಭವಿಗಳು ರೇಷನ್ ಕಾರ್ಡ್ ಪೋರ್ಟೇಬಿಲಿಟಿ ಪ್ರಯೋಜನಕ್ಕೆ ಒಳಪಟ್ಟಿದ್ದಾರೆ ಮತ್ತು ಅವರು ಸಬ್ಸಿಡಿ ಆಹಾರಧಾನ್ಯಗಳನ್ನು ಪ್ರಸ್ತುತ ತಮ್ಮಲ್ಲಿರುವ ರೇಷನ್ ಕಾರ್ಡ್ ಬಳಸಿ ದೇಶದ ಯಾವುದೇ ಭಾಗದಲ್ಲಿ ಆದರೂ ಪಡೆದುಕೊಳ್ಳಬಹುದು” ಅನಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ,ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ ಮಧ್ಯಪ್ರದೇಶ, ಜಾರ್ಖಂಡ್, ಗೋವಾ ಮತ್ತು ತ್ರಿಪುರಾಗಳು ‘ಒನ್ ನೇಶನ್ ಒನ್ ರೇಷನ್ ಕಾರ್ಡ್’ಯೋಜನೆಗೆ ಒಳಪಟ್ಟಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.