ಕೋಲಾರ: ಕೊರೋನಾ ಸೋಂಕು ಹರಡುವ ಭೀತಿಯಿಂದ ದೇಶವನ್ನು ಲಾಕ್ಡೌನ್ ಮಾಡಿ ಪ್ರಧಾನಿ ಮೋದಿ ಆದೇಶ ನೀಡಿದ್ದರೂ, ಕೋಲಾರದ ಮಸೀದಿಯಲ್ಲಿ ಗುಂಪು ಪ್ರಾರ್ಥನೆ ನಡೆದಿದೆ. ಆದೇಶ ಉಲ್ಲಂಘನೆ ಮಾಡಿ ನಮಾಜ್ ಮಾಡುತ್ತಿದ್ದ 11 ಮಂದಿಯನ್ನು ತಹಶೀಲ್ದಾರ್ ಶೋಭಿತಾ ಅವರು ಮಸೀದಿಯ ಒಳಗೆ ಹೋಗಿ ವಶಕ್ಕೆ ಪಡೆದಿರುವ ವಿಡಿಯೋ ಈಗ ವೈರಲ್ ಆಗಿದೆ.
ಕೋವಿಡ್-19 ಹರಡದಂತೆ ಈಗಾಗಲೇ ಅನೇಕ ಕಾನೂನು ಕ್ರಮಗಳನ್ನು, ನೀತಿ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಎಲ್ಲವನ್ನೂ ಗಾಳಿಗೆ ತೂರಿ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲಾಗಿದೆ. ಈ ಬಗ್ಗೆ ಬಂದ ಖಚಿತ ಮಾದರಿಯನ್ನು ಆಧರಿಸಿ ಶೋಭಿತಾ ಅವರು ಸ್ಥಳಕ್ಕೆ ಧಾವಿಸಿದ್ದು, ಗುಂಪುಗೂಡಿದ್ದ 11 ಜನರನ್ನು ಮಸೀದಿಯಲ್ಲಿಯೇ ಬಂಧನದಲ್ಲಿರಿಸಲು ಸೂಚಿಸಿದ್ದಾರೆ. ಅಲ್ಲದೆ ಈ ರೀತಿ ಕಾನೂನು ಉಲಂಘಿಸಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದಿಂದ ಮುಕ್ತರಾಗಲು ಗುಂಪು ಸೇರದಂತೆ, ಸಭೆ ಸಮಾರಂಭಗಳನ್ನು ಆಯೋಜಿಸದಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಧಾರ್ಮಿಕ ಕಾರ್ಯಗಳನ್ನು ಗುಂಪಾಗಿ ಮಾಡದಿರುವುದು ಸೇರಿದಂತೆ ಇನ್ನೂ ಅನೇಕ ಕ್ರಮಗಳನ್ನು ಪಾಲಿಸುವಂತೆ ತಿಳಿಸಲಾಗಿದ್ದರೂ, ಕೋಲಾರದಲ್ಲಿ ಮಾತ್ರ ಮಸೀದಿಯೊಳಗೆ ಗುಂಪು ಪ್ರಾರ್ಥನೆ ನಡೆಸುವ ಮೂಲಕ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಆದರೆ ತಹಶೀಲ್ದಾರ್ ಶೋಭಿತಾ ಈ ರೀತಿಯ ವರ್ತನೆ ತೋರಿದವರ ವಿರುದ್ಧ ಮಸೀದಿಯೊಳಕ್ಕೆ ಹೋಗಿ ಕ್ರಮ ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
Kudos.!👏👏
Respect to the Courage and Guts of Shobita Ji.
She’s a Tahsildar from Kolar, Karnataka
She entered Mosque and asked to follow the rules of Lockdown
She is a First Officer who Entered into Mosque and told to do prayer in House
BIG CLAP for this BOLD LADY.! pic.twitter.com/Fbj5Zywjjk
— Ganesh Jai Hind (@GaneshJaiHind) May 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.