ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,718 ಹೊಸ ಕೊರೋನಾವೈರಸ್ ಸೋಂಕು ಮತ್ತು 67 ಸಾವುಗಳನ್ನು ದಾಖಲಿಸಿದ್ದು, ದೇಶದಲ್ಲಿ ಒಟ್ಟು COVID-19 ಪ್ರಕರಣಗಳ ಸಂಖ್ಯೆ 33,050 ಕ್ಕೆ ತಲುಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,074 ಆಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 33,050 ಆಗಿದ್ದು, ಇದರಲ್ಲಿ 23,651 ಸಕ್ರಿಯ ಪ್ರಕರಣಗಳು, 8,325 ಗುಣಪಡಿಸಿದ ಪ್ರಕರಣಗಳು ಮತ್ತು ಒಟ್ಟು 1,074 ಸಾವುಗಳು ಸೇರಿವೆ. ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ವಿದೇಶಿ ಪ್ರಜೆಗಳು, ಚೇತರಿಸಿಕೊಂಡ ರೋಗಿಗಳು ಮತ್ತು ಸಾವಿನ ಸಂಖ್ಯೆ ಒಳಗೊಂಡ ಪ್ರಕರಣಗಳು ಸೇರಿವೆ.
9,915 ದೃಢಪಡಿಸಿದ ಕೊರೋನಾವೈರಸ್ ಪ್ರಕರಣಗಳೊಂದಿಗೆ, ಮಹಾರಾಷ್ಟ್ರವು ದೇಶದ ಅತ್ಯಂತ ಪೀಡಿತ ರಾಜ್ಯವಾಗಿ ಉಳಿದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಈರಾಜ್ಯವು ಈವರೆಗೆ 432 COVID-19 ಸಾವುಗಳನ್ನು ವರದಿ ಮಾಡಿದೆ. ರಾಜ್ಯದಲ್ಲಿ 1,593 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಗುಜರಾತ್ (4,082) ಮತ್ತು ದೆಹಲಿ (3,439) ಇವೆ. 4,082 ದೃಢಪಡಿಸಿದ ಕೊರೋನಾವೈರಸ್ ಪ್ರಕರಣಗಳೊಂದಿಗೆ, ಗುಜರಾತ್ ತೀವ್ರವಾಗಿ ಬಾಧಿಸಲ್ಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯವು ಈವರೆಗೆ 197 COVID-19 ಸಾವುಗಳನ್ನು ವರದಿ ಮಾಡಿದೆ. ರಾಜ್ಯದಲ್ಲಿ 527 ರೋಗಿಗಳು ಚೇತರಿಸಿಕೊಂಡಿದ್ದಾರೆ.
3,439 ದೃಢಪಡಿಸಿದ ಕೊರೋನವೈರಸ್ ಪ್ರಕರಣಗಳೊಂದಿಗೆ, ದೆಹಲಿಯು ಸಹ ತೀವ್ರವಾಗಿ ಮಾಡಿಸಲ್ ಪಟ್ಟಿದೆ ಬಾಧಿಸಲ್ಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ರಾಷ್ಟ್ರ ರಾಜಧಾನಿ ಇದುವರೆಗೆ 56 COVID-19 ಸಾವುಗಳನ್ನು ವರದಿ ಮಾಡಿದೆ. 1,092 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಿಂದ ತಲಾ ಒಂದು ಅಂದರೆ ಅತಿ ಕಡಿಮೆ ಪ್ರಕರಣಗಳು ವರದಿಯಾಗಿವೆ.
ಇಂದು ಭಾರತದ ರಾಷ್ಟ್ರವ್ಯಾಪಿ ಲಾಕ್ಡೌನ್ನ 37 ನೇ ದಿನವಾಗಿದೆ, ಮೇ 3 ರವರೆಗೆ ಮುಂದುವರೆಯಲಿದೆ. ಪ್ರಸ್ತುತ ಇರುವ ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಮೇ 3 ರ ಆಚೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರವು ಬುಧವಾರ ಸುಳಿವು ನೀಡಿದೆ. ಆದರೆ ಅನೇಕ ಜಿಲ್ಲೆಗಳು ನಿರ್ಬಂಧಗಳಿಂದ ಸಾಕಷ್ಟು ವಿನಾಯಿತಿ ಪಡೆಯುವ ನಿರೀಕ್ಷೆಯಿದೆ.
ಕೊರೋನಾವೈರಸ್ ಬೆದರಿಕೆಯನ್ನು ಎದುರಿಸುವ ಉದ್ದೇಶದಿಂದ ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಘೋಷಿಸಿದರು. ಏಪ್ರಿಲ್ 14 ರಂದು ಕೊನೆಗೊಂಡ 21 ದಿನಗಳ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಯಿತು.
ಈ ನಡುವೆ, ಪ್ರಪಂಚದಾದ್ಯಂತ ಮೂರು ದಶಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ ಮತ್ತು ಅಮೆರಿಕಾ ಅತ್ಯಂತ ಬಾಧಿಸಲ್ಪಟ್ಟ ರಾಷ್ಟ್ರವಾಗಿ ಮುಂದುವರೆದಿದೆ. ಆದರೂ, ಇದು ಹಂತ ಹಂತವಾಗಿ ಆರ್ಥಿಕತೆಯನ್ನು ಮತ್ತೆ ತೆರೆಯಲು ಪ್ರಾರಂಭಿಸಿದೆ. ವಾಸ್ತವವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಸೂಚನೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.