News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ಲಾಸ್ಮಾ ಥೆರಪಿ ಪ್ರಯೋಗ ಹಂತದಲ್ಲಿದೆ, ಅದರ ಬಳಕೆ ಸಮರ್ಥನೆಗೆ ಸಾಕ್ಷಿಯಿಲ್ಲ : ಆರೋಗ್ಯ ಸಚಿವಾಲಯ

ನವದೆಹಲಿ: ಕನ್ವಲೆಸೆಂಟ್ ಪ್ಲಾಸ್ಮಾ ಥೆರಪಿ ಕೊರೋನಾವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ. ಆದರೆ ಮಂಗಳವಾರ ಆರೋಗ್ಯ ಸಚಿವಾಲಯವು, ಪ್ಲಾಸ್ಮಾ ಥೆರಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಮತ್ತು ಇದರ ಬಳಕೆಯನ್ನು ಸಮರ್ಥಿಸಿಕೊಳ್ಳುವಂತಹ ಯಾವುದೇ ಸಾಕ್ಷಿಗಳು ಇಲ್ಲ ಎಂದಿದೆ.

ಮಾಧ್ಯಮಗಳಿಗೆ ವಿವರಣೆ ನೀಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ನೊವೆಲ್ ಕೊರೋನಾವೈರಸ್ ಸೃಷ್ಟಿ ಮಾಡುವ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಯಾವುದೇ ಥೆರಪಿಮನ್ನು ಇದುವರೆಗೆ‌ ಅನುಮೋದಿಸಲಾಗಿಲ್ಲ. ಕಾನ್ವಲೆಸೆಂಟ್ ಪ್ಲಾಸ್ಮ ಥೆರಪಿ ಅನ್ನು ಬಳಸಬಹುದು ಎಂಬುದಕ್ಕೆ ಯಾವುದೇ ನಿಖರ ಸಾಕ್ಷಿಗಳಿಲ್ಲ ಎಂದಿದ್ದಾರೆ.

“ಐಸಿಎಂಆರ್ ಕೋವಿಡ್-19 ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಯ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡುವ ಸಲುವಾಗಿ ರಾಷ್ಟ್ರವ್ಯಾಪಿ ಅಧ್ಯಯನವನ್ನು ಆರಂಭಿಸಿದೆ” ಎಂದಿದ್ದಾರೆ.

“ಐಸಿಎಂಆರ್ ತನ್ನ ಅಧ್ಯಯನವನ್ನು ಮುಗಿಸುವವರೆಗೂ ಮತ್ತು ವೈಜ್ಞಾನಿಕ ಸಾಕ್ಷಿಗಳು ಲಭ್ಯವಾಗುವವರೆಗೂ ಪ್ಲಾಸ್ಮಾ ಥೆರಪಿಯನ್ನು ಕೇವಲ ಸಂಶೋಧನೆ ಮತ್ತು ಪ್ರಯೋಗಗಳ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕು. ಒಂದು ವೇಳೆ ಪ್ಲಾಸ್ಮಾ ಥೆರಪಿಯನ್ನು ಸಮರ್ಪಕವಾದ ವಿಧಾನದಲ್ಲಿ ನಿರ್ದೇಶನಗಳಿಗೆ ಅನುಗುಣವಾಗಿ ಬಳಕೆ ಮಾಡದೇ ಹೋದರೆ ಅದು ಪ್ರಾಣ ಹಾನಿಯಂತಹ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು” ಎಂದು ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ಖಾಸಗಿ ಆಸ್ಪತ್ರೆಯೊಂದು, ತಾನು 49 ವರ್ಷದ ರೋಗಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿದ್ದಾಗಿ ಮತ್ತು ಅವರು ಸಂಪೂರ್ಣ ಚೇತರಿಸಿಕೊಂಡು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ಹೇಳಿಕೊಂಡಿದೆ.

ಅಗರ್ವಾಲ್ ಅವರು ಹೇಳಿರುವಂತೆ, ಪ್ಲಾಸ್ಮ ಥೆರಪಿ ಯಾವುದೇ ಮ್ಯಾಜಿಕ್ ಬುಲೆಟ್ ಅಲ್ಲ. ಪ್ಲಾಸ್ಮಾ ಥೆರಪಿ ಮೂಲಕ ಶೇಕಡ ನೂರರಷ್ಟು ಗುಣಮುಖವಾಗಬಹುದು ಎಂಬುವ ಗ್ಯಾರಂಟಿ ಕೂಡ ಇಲ್ಲ. ದೆಹಲಿಯ ರೋಗಿಯು ಗುಣಮುಖರಾಗಲು ಇತರ ಕಾರಣಗಳೂ ಇರಬಹುದು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top