ನವದೆಹಲಿ: ಸಿಂಗಾಪುರ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ ರಿಸರ್ಚ್ರ್ಸ್, 2020 ರ ಜುಲೈ 25 ರ ವೇಳೆಗೆ ಭಾರತವು ಶೇಕಡಾ 100 ರಷ್ಟು ಕೊರೋನಾವೈರಸ್ ಮುಕ್ತವಾಗಲಿದೆ ಎಂದು ಹೇಳಿದೆ.
ಕೃತಕ ಬುದ್ಧಿಮತ್ತೆ-ಚಾಲಿತ ದತ್ತಾಂಶ ವಿಶ್ಲೇಷಣೆ ವಿಧಾನದ ಮೂಲಕ ಸಂಶೋಧಕರು, ಶೇಕಡಾ 97ರಷ್ಟು ಕೊರೊನಾವೈರಸ್ ಪ್ರಕರಣಗಳು ಭಾರತದಿಂದ ಮೇ 22 ರ ವೇಳೆಗೆ ನಿರ್ಮೂಲನೆ ಆಗಲಿದೆ, ಜೂನ್ 1 ರ ವೇಳೆಗೆ ಶೇ. 99 ರಷ್ಟು ಮತ್ತು ಜುಲೈ 25ರ ವೇಳೆಗೆ ದೇಶವು ಶೇಕಡಾ 100 ರಷ್ಟು ಕೊರೋನಾವೈರಸ್ ಮುಕ್ತವಾಗಿರುತ್ತದೆ ಎಂದು ಹೇಳಿದೆ.
ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಇಟಲಿ, ಸ್ಪೇನ್, ಯುಕೆ ಸೇರಿದಂತೆ ವಿಶ್ವ ಮತ್ತು ಇತರ ದೇಶಗಳು ಕೊರೋನಾವೈರಸ್ನಿಂದ ಯಾವಾಗ ಮುಕ್ತವಾಗುತ್ತವೆ ಎಂಬುದನ್ನು ಕೂಡ ಸಿಂಗಾಪುರ ವಿಶ್ವವಿದ್ಯಾಲಯದ ಈ ವರದಿಯು ಊಹಿಸಿದೆ.
ಸಿಂಗಾಪುರ್ ಟೆಕ್ನಾಲಜಿ ಅಂಡ್ ಡಿಸೈನ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಆಗಸ್ಟ್ 27ರ ವೇಳೆಗೆ ಅಮೆರಿಕವು ಕೊರೋನವೈರಸ್ನಿಂದ ಮುಕ್ತವಾಗಲಿದ್ದು, 2020 ರ ಡಿಸೆಂಬರ್ 9 ರೊಳಗೆ ವೈರಸ್ ಅನ್ನು ಪ್ರಪಂಚದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುತ್ತದೆ ಎಂದಿದೆ.
ಸಿಂಗಾಪುರ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಶೇಕಡಾ 97 ರಷ್ಟು ಕೊರೊನಾವೈರಸ್ ಪ್ರಕರಣಗಳು ಮೇ 30 ರೊಳಗೆ, ಶೇ.99 ಜೂನ್ 17 ರ ವೇಳೆಗೆ ಮತ್ತು ಶೇ.100ರಷ್ಟು 2020 ರ ಡಿಸೆಂಬರ್ 9 ರೊಳಗೆ ಕೊನೆಗೊಳ್ಳಲಿದೆ.
ಫ್ರಾನ್ಸ್ನಲ್ಲಿ, ಶೇಕಡಾ 97 ರಷ್ಟು ಕೊರೊನಾವೈರಸ್ ಪ್ರಕರಣಗಳು ಮೇ 6 ರ ವೇಳೆಗೆ, 99 ರಷ್ಟು ಮೇ 18 ರ ವೇಳೆಗೆ ಮತ್ತು 100 ರಷ್ಟು ಆಗಸ್ಟ್ 5 ರೊಳಗೆ ಕೊನೆಗೊಳ್ಳಲಿವೆ. ಇಟಲಿಯಲ್ಲಿ, ಮೇ 8 ರ ವೇಳೆಗೆ 97 ಶೇಕಡಾ, ಮೇ 21 ರ ವೇಳೆಗೆ ಶೇ.99 ಮತ್ತು ಆಗಸ್ಟ್ 25ರ ವೇಳೆಗೆ 100 ಶೇಕಡಾ ಪ್ರಕರಣಗಳು ಕೊನೆಗೊಳ್ಳಲಿವೆ.
ಮೇ 4 ರ ವೇಳೆಗೆ ಸ್ಪೇನ್ ಕೊರೊನಾವೈರಸ್ ಪ್ರಕರಣಗಳಲ್ಲಿ ಶೇಕಡಾ 97, ಮೇ 16 ರ ವೇಳೆಗೆ 99 ಮತ್ತು ಆಗಸ್ಟ್ 7 ರ ವೇಳೆಗೆ 100 ಶೇಕಡಾ ಕುಸಿತವನ್ನು ಕಾಣಬಹುದು. ಯುಕೆ ನಲ್ಲಿ ಮೇ 16 ರ ವೇಳೆಗೆ 97 ಶೇಕಡಾ, ಮೇ 27 ರ ವೇಳೆಗೆ 99 ಶೇಕಡಾ ಮತ್ತು 100 ರಷ್ಟು ಆಗಸ್ಟ್ 14 ರ ವೇಳೆಗೆ ಕೊನೆಯಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.