ವಾಷಿಂಗ್ಟನ್: ಆಕೆಯ ವಯಸ್ಸಿನ ಮಕ್ಕಳು ವಿಡಿಯೋ ಗೇಮ್, ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್ಗಳನ್ನೇ ನೆಚ್ಚಿಕೊಂಡು, ಅದರಲ್ಲೇ ಕಾಲ ಕಳೆಯುವ ಸಮಯ. ಆದರೆ ಭಾರತೀಯ ಮೂಲದ ಅಮೆರಿಕಾದ ಪೆನ್ಸಿಲ್ವೇನಿಯಾ ನಿವಾಸಿ 15 ವರ್ಷದ ಹಿತಾ ಗುಪ್ತ ಮಾತ್ರ ಈ ಲಾಕ್ಡೌನ್ ಸಮಯವನ್ನು ಹೆಚ್ಚು ಅರ್ಥಪೂರ್ಣ ಮತ್ತು ಮಾದರಿಯಾಗಿ ಕಳೆಯುತ್ತಿದ್ದಾಳೆ.
ಅನಾಥರಾಗಿರುವ ನೂರಾರು ಅಮೆರಿಕ ನಿವಾಸಿಗಳ, ವೃದ್ಧರ ಒಂಟಿತನ ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತು ಅವರಲ್ಲಿ ಸಂತೋಷ, ಉತ್ಸಾಹ ಮೂಡಿಸುವ ಸದುದ್ದೇಶದೊಂದಿಗೆ ಹಿತ ಅವರಿಗೆ ಉಡುಗೊರೆಗಳನ್ನು ಕಳುಹಿಸುವ ಮೂಲಕ ಅಚೇತನರಲ್ಲಿ ಚೇತನ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾಳೆ. ಆ ಮೂಲಕ ತುರ್ತು ಸ್ಥಿತಿ ಕೊರೋನಾ ನಿಯಂತ್ರಣ ಕ್ರಮಗಳಿಂದ ಉಂಟಾಗುತ್ತಿರುವ ಬೇಸರ ಹೋಗಲಾಡಿಸುವ ಕೆಲಸವನ್ನು ಮಾಡುತ್ತಿದ್ದಾಳೆ.
ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ ಹಿತಾ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಸಂದರ್ಭದಲ್ಲಿ ಅವರ ಮನೆಯವರನ್ನು ಭೇಟಿ ಮಾಡುವ ಅವಕಾಶವಿಲ್ಲ. ಇದರಿಂದ ಒಂಟಿತನಕ್ಕೆ ಜಾರುವ ಸಂದರ್ಭ ಹೆಚ್ಚು. ಇನ್ನು ಸಃಶೋಧನೆಗಳ ಪ್ರಕಾರ ಸುಮಾರು 40% ವೃದ್ಧರು ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಅವರನ್ನು ಖುಷಿ ಪಡಿಸಲು ಮತ್ತು ಅವರಲ್ಲಿ ಮನೋಸ್ಥೈರ್ಯ ತುಂಬುವ ಸಲುವಾಗಿ ತಾನು ಈ ಕೆಲಸಕ್ಕೆ ತೊಡಗಿರುವುದಾಗಿ ತಿಳಿಸಿದ್ದಾಳೆ.
ಈ ಕೆಲಸಕ್ಕೆ ತನ್ನ ರಜಾ ದಿನಗಳನ್ನು ಬಳಸುವ ಈಕೆ ಗಿಫ್ಟ್ ತಯಾರಿ ಮಾಡುತ್ತಾಳೆ. ಪೆನ್ಸಿಲ್, ಕ್ರೆಯಾನ್ ಪುಸ್ತಕಗಳನ್ನು ಮಕ್ಕಳಿಗೆ ನೀಡುತ್ತಾಳೆ. ಈವರೆಗೆ ಸುಮಾರು 16 ನರ್ಸಿಂಗ್ ಹೋಂ ಗಳಿಗೆ ತಾನು ಇಃತಹ ಉಡುಗೊರೆಗಳನ್ನು ಎನ್ಜಿಒ ಹೆಸರಿನಲ್ಲಿ ನೀಡಿರುವುದಾಗಿಯೂ ಹಿತಾ ತಿಳಿಸಿದ್ದಾಳೆ. ಒಟ್ಟಾರೆ ಹೇಳುವುದಾದರೆ ಆಟವಾಡಬೇಕಾದ ವಯಸ್ಸಿನಲ್ಲಿ ಅಶಕ್ತರಲ್ಲಿ ಚೈತನ್ಯ ತುಂಬುವ ಹಿತ ಎಲ್ಲ ಮಕ್ಕಳಿಗೂ ಮಾದರಿ ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.