ಪುರಿ: ಕೊರೋನಾ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ನಿಜ ನಾಯಕರಾದ ವೈದ್ಯಕೀಯ ಸಿಬ್ಬಂದಿ, ದಾದಿಯರು ಮತ್ತು ಎಲ್ಲಾ ರೀತಿಯ ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ, ಪುರಿ ಬೀಚ್ನಲ್ಲಿ ಮರಳು ಚಿತ್ರದ ಮೂಲಕ ಕಲಾವಿದ ಸುದರ್ಶನ್ ಪಾಟ್ನಾಯಕ್ ಕೃತಜ್ಞತೆ ಅರ್ಪಿಸಿದ್ದಾರೆ.
ಸಾಂಕ್ರಾಮಿಕ ರೋಗಕ್ಕೆ ತಮ್ಮ ಹಾಗೂ ತಮ್ಮ ಕುಟುಂಬದ ಹಿತವನ್ನೂ ಲೆಕ್ಕಿಸದೆ, ಸೋಂಕಿತರ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗಳಿಗೆ “A Salute To The Heroes” ಎಂಬ ಸಂದೇಶ ಬರೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ. ದೇಶದ ಎಲ್ಲಾ ಜನರೂ ಲಾಕ್ಡೌನ್ನಿಂದಾಗಿ ಮನೆಯೊಳಗಿದ್ದರೆ ಆರೋಗ್ಯ ಸಿಬ್ಬಂದಿ ಮಾತ್ರ ದಿನದ 24 ಗಂಟೆಯೂ ಸೇವೆ ನೀಡುತ್ತಿದ್ದಾರೆ. ಅಂತಹ ಶ್ರಮಜೀವಿಗಳಿಗೆ ಸ್ಯಾಂಡ್ ಆರ್ಟ್ ರಚಿಸಿ ಗೌರವ ಸಲ್ಲಿಸಿದ್ದಾರೆ.
ಇನ್ನು ದೇಶದಲ್ಲಿ ಮಾರ್ಚ್ 21 ರಂದು ಆರಂಭವಾದ ಲಾಕ್ಡೌನ್ ಮೇ 3 ರ ವರೆಗೂ ವಿಸ್ತರಿಸಲ್ಪಟ್ಟಿದೆ. ಲಾಕ್ಡೌನ್ನ ವಿಸ್ತರಿತ ಅವಧಿಯಲ್ಲಿ ಕೆಲವು ಅಗತ್ಯ ಕ್ಷೇತ್ರಗಳಿಗಷ್ಟೇ ಕೊಂಚ ಮಟ್ಟಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ ಈ ವರೆಗೆ ದೇಶದಲ್ಲಿ ಸೋಂಕಿನಿಂದ 21,700 ಮಂದಿ ನರಳುತ್ತಿದ್ದು, 4,324 ಮಂದಿ ಗುಣಮುಖರಾಗಿದ್ದಾರೆ. 686 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.