ನವದೆಹಲಿ: ಚೀನಾದಿಂದ ತರಿಸಲಾದ ಕೊರೋನಾವೈರಸ್ ರ್ಯಾಪಿಡ್ ಟೆಸ್ಟ್ ಕಿಟ್ಗಳು ವಿಫಲವಾದ ಹಿನ್ನೆಲೆಯಲ್ಲಿ ಭಾರತವು ದಕ್ಷಿಣ ಕೊರಿಯಾದ ಕೊರೋನಾ ಟೆಸ್ಟ್ ಕಿಟ್ಗಳನ್ನು ತರಿಸಲು ನಿರ್ಧರಿಸಿದೆ.
ಸುಮಾರು 5ಲಕ್ಷ ಕೊರೋನಾ ಟೆಸ್ಟ್ ಕಿಟ್ಗಳನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ಗುರುವಾರ ತಿಳಿಸಿದ್ದಾರೆ.
ಶ್ರೀವಾಸ್ತವ್ ಅವರ ಪ್ರಕಾರ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಮ್ಮುಖದಲ್ಲಿ ಕೊರಿಯಾದ ಕಂಪನಿಯ ಕಿಟ್ಗಳನ್ನು ಭಾರತಕ್ಕೆ ನೀಡಲು ಒಪ್ಪಂದಕ್ಕೆ ಸಹಿ ಹಾಕಿದೆ.
ರಾಪಿಡ್ ಟೆಸ್ಟಿಂಗ್ ಕಿಟ್ಗಳನ್ನು ಬಳಕೆ ಮಾಡದಂತೆ ಐಸಿಎಂಆರ್ ಇತ್ತೀಚಿಗೆ ರಾಜ್ಯ ಮಂಡಳಿಗಳಿಗೆ ನಿರ್ದೇಶನವನ್ನು ನೀಡಿದ ತರುವಾಯ ಈ ಬೆಳವಣಿಗೆ ನಡೆದಿದೆ. ಚೀನಾದಿಂದ ಇತ್ತೀಚಿಗಷ್ಟೇ ಭಾರತ 5ಲಕ್ಷ ಕಿಟ್ಗಳನ್ನು ತರಿಸಿಕೊಂಡಿತ್ತು, ಆದರೆ ಈ ಕಿಟ್ಗಳು ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಿಂದ ಕಿಟ್ಗಳನ್ನು ಆಮದು ಮಾಡಿಕೊಳ್ಳಲು ಭಾರತ ಮುಂದಾಗಿದೆ.
“ಭಾರತ ಈಗಾಗಲೇ ಸುಮಾರು 400 ಟನ್ ಮೆಡಿಕಲ್ ಸಪ್ಲೈ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. ಇದರಲ್ಲಿ ಆರ್ಟಿ-ಪಿಸಿಆರ್, ಟೆಸ್ಟ್ ಕಿಟ್ಸ್, ರಾಪಿಡ್ ಆಂಟಿ ಬಾಡಿ ಟೆಸ್ಟ್ಸ್, ಪಿಪಿಎಫ್ ಕಿಟ್ಸ್, ಥರ್ಮಾಮೀಟರ್ ಸೇರಿದಂತೆ ಹಲವು ಪರಿಕರಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.