ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಕೊರೋನಾವೈರಸ್ ಮುಕ್ತ ಜಿಲ್ಲೆಯಾಗಿ ಕಾರ್ಗಿಲ್ ಹೊರಹೊಮ್ಮಿದೆ. ಕೊರೋನವೈರಸ್ ಪೀಡಿತನಾಗಿದ್ದ ಇಲ್ಲಿನ ನಾಲ್ಕನೇ ರೋಗಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ಈ ಜಿಲ್ಲೆ ಕರೋನ ವೈರಸ್ ಮುಕ್ತವಾಗಿ ಹೊರಹೊಮ್ಮಿದೆ.
ವೈರಸ್ ಮುಕ್ತವಾಗಿ ಹೊರಹೊಮ್ಮಿದ ರೋಗಿಯನ್ನು ವೈದ್ಯರುಗಳು ಅತ್ಯಂತ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ಎರಡು ಬಾರಿ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ಹಿಂದೆ ಡಿಸ್ಚಾರ್ಜ್ ಆಗಿರುವ ರೋಗ್ಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ನಾಲ್ಕನೇ ರೋಗಿಗೆ ವೈರಸ್ ಅಂಟಿಕೊಂಡಿತ್ತು.
ಲಡಾಕ್ ಸಂಸದ ಜಮ್ಯಂಗ್ ತ್ಸೇರಿಂಗ್ ನಂಗ್ಯಲ್ ಅವರು, ಕಾರ್ಗಿಲ್ ಅನ್ನು ಕೊರೋನಾ ಮುಕ್ತಗೊಳಿಸಿದ ಕೊರೋನವೈರಸ್ ಯೋಧರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
Kargil becomes Covid-19 free District.
Thanks all warriors!
— Jamyang Tsering Namgyal (@MPLadakh) April 22, 2020
ಈಗಾಗಲೇ ಗೋವಾ, ಮಣಿಪುರ ದೇಶದ ಮೊದಲ ಕೊರೋವೈರಸ್ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಎಪ್ರಿಲ್ 3 ರ ಬಳಿಕ ಇಲ್ಲಿ ಒಂದೇ ಒಂದು ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.