ನವದೆಹಲಿ: ಕೊರೋನಾ ಕುರಿತಾದಂತೆ ಬಿಸಿಸಿಐ ವತಿಯಿಂದ #TeamMaskForce ಅಭಿಯಾನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಂತೆಯೇ ಇದೀಗ ದೇಶದ ಎಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಗುರೂತಿಸಿಕೊಂಡಿರು ಸ್ಟಾರ್ ಆಟಗಾರರು ಔಟ್ಲುಕ್ ಇಂಡಿಯಾ ಮೂಲಕ ಕೋವಿಡ್-19 ಜಾಗೃತಿ ಮೂಡಿಸುವ ವಿಡಿಯೋಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಕೊರೋನಾ ಹರಡದಂತೆ ಅನೇಕ ನಿಯಂತ್ರಣ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತಂದಿದೆ. ಇವೆಲ್ಲವನ್ನು ಅನುಸರಿಸುವ ಮೂಲಕ ಕೊರೋನಾ ಸೋಂಕಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಸಾಧ್ಯ ಎಂಬ ಸಂದೇಶದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದೂ, ಗುಂಪು ಸೇರದಿರುವುದು, ಮನೆಯಲ್ಲಿಯೇ ಇರುವುದು, ಶುಚಿತ್ವ, ಲಾಕ್ಡೌನ್ ನಿಯಮಗಳ ಪಾಲನೆ ಮೊದಲಾದವುಗಳ ಬಗ್ಗೆ ಔಟ್ಲುಕ್ ಇಂಡಿಯಾದಲ್ಲಿ ವಿಡಿಯೋ ಹಾಕಿದ್ದು ಆ ಮೂಲಕ ʼನಮಸ್ತೇ ಇಂಡಿಯಾ, ಮನೆಯಲ್ಲೇ ಇರಿ, ಸುರಕ್ಷಿತರಾಗಿರಿʼ ಎಂಬ ಸಂದೇಶದೊಂದಿಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಈ ವಿಡಿಯೋದ ವಿಶೇಷತೆ ಏನೆಂದರೆ, ಭಾರತದ ಎಲ್ಲಾ ಕ್ರೀಡಾ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಆಟಗಾರರು ಜೊತೆ ಸೇರಿ ಈ ಅವೇರ್ನೆಸ್ ವಿಡಿಯೋ ಮಾಡಿದ್ದಾರೆ. ಎಂ.ಪಿ. ಮತ್ತು ಬಾಕ್ಸರ್ ಆಗಿರುವ ಮೇರಿ ಕೊಮ್, ಭಾರತದ ಫೂಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭೂತಿಯಾ, ಶಟ್ಲರ್ ಮತ್ತು ಕೋಚ್ ಆಗಿರುವ ಪಿ. ಗೋಪಿಚಂದ್, ಅತ್ಲೆಟ್ ಅಂಜು ಬಾಬಿ ಜಾರ್ಜ್, ಕ್ರಿಕೆಟರ್ಗಳಾದ ಹರ್ಭಜನ್ ಸಿಂಗ್, ವಿರೇಂದ್ರ ಸೆಹ್ವಾಗ್, ಮಿಥಾಲಿ ರಾಜ್ ಸೇರಿದಂತೆ ಸಚಿನ್ ತೆಂಡೂಲ್ಕರ್, ಕೊಹ್ಲಿ, ಸುನಿಲ್ ಗಾವಸ್ಕರ್, ರೈನಾ ಮೊದಲಾದವರು ಈ ಜಾಗೃತಿ ಅಭಿಯಾನದ ವಿಡಿಯೋಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇನ್ನು ಕೊರೋನಾ ವೈರಸ್ನಿಂದಾಗಿ ಜಗತ್ತಿನಾದ್ಯಂತ ನಡೆಯಬೇಕಾಗಿದ್ದ ಎಲ್ಲಾ ಕ್ರೀಡಾ ಸ್ಪರ್ಧೆಗಳೂ ಕ್ಯಾನ್ಸಲ್ ಆಗಿದೆ. ಇದೀಗ ಭಾರತೀಯ ಕ್ರೀಡಾಪಟುಗಳು ಈ ಲಾಕ್ಡೌನ್ ಸಮಯವನ್ನು ಉಪಯೋಗಿಸಿಕೊಂಡು ತಮ್ಮ ಅಭಿಮಾನಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.