ನವದೆಹಲಿ: ಲಾಕ್ಡೌನ್ ನಂತರದಲ್ಲಿ ನಕಲಿ ವಿಮಾ ಕಂಪನಿಗಳು ಆನ್ಲೈನ್ ಮೂಲಕ ಜನರನ್ನು ಮರುಳು ಮಾಡಿ ಹಣ ಹೂಡಿಕೆ ಮಾಡಿಸಿಕೊಳ್ಳುವ ದಂಧೆಗೆ ತೊಡಗಿದ್ದು, ಈ ಕುರಿತಾಗಿ IRDAI ಗ್ರಾಹಕರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
ಭಾರತೀಯ ಇನ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ(IRDAI), ಸೈಬರ್ ವಿಮಾ ವಂಚನೆ, ಆನ್ಲೈನ್ ಮೂಲಕ ವಿಮಾ ಪಾಲಿಸಿಗಳ ಸುಳ್ಳು ಮಾಹಿತಿಗಳನ್ನು ನಕಲಿ ವಿಮಾ ಕಂಪನಿಗಳು ನೀಡಲಾರಂಭಿಸಿವೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬಿ ಮೋಸ ಹೋಗದಂತೆ ಜನರಿಗೆ ತಿಳಿಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಇಃತಹ ವಿಮೆಗಳ ಬಗ್ಗೆ ಜನರು ಹೆಚ್ಚು ಉತ್ಸಾಹ ತೋರುವ ಸಾಧ್ಯತೆಗಳಿದ್ದು, ಅಂತಹವುಗಳ ಬಗ್ಗೆ ಜಾಗರೂಕರಾಗಿರುವಂತೆ IRDAI ಮಾಹಿತಿ ನೀಡಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅಥಾರಿಟಿ, ಆನ್ಲೈನ್ನಲ್ಲಿ ನಕಲಿ ವಿಮಾ ಕಂಪನಿಗಳು ಕಡಿಮೆ ಪ್ರೀಮಿಯಂಗೆ ವಿಮೆ ಮಾಡಿಕೊಳ್ಳುವಂತೆ ತಿಳಿಸುತ್ತಿವೆ. ಇಂತಹ ವಂಚನೆಯ ಬಗ್ಗೆ ಮಾಹಿತಿಗಳು ಬರುತ್ತಿವೆ. ಆಗಾಗ್ಗೆ ವರದಿಯಾಗುತ್ತಿವೆ. ಆದ್ದರಿಂದ ಈ ಕೆಳಗಿನ ಘಟಕಗಳ ವಿಮೆಗಳಲ್ಲಷ್ಟೇ ಜನರು ತೊಡಗಿಸಿಕೊಳ್ಳುವಂತೆಯೂ ಮನವಿ ಮಾಡಿದೆ.
* IRDAI ನಲ್ಲಿ ನೋಂದಾಯಿಸಿಕೊಂಡ ವಿಮಾ ಕಂಪನಿಗಳಲ್ಲಷ್ಟೇ ತೊಡಗಿಸಿಕೊಳ್ಳಿ
* IRDAI ನಲ್ಲಿ ವ್ಯವಹಾರ ನಡೆಸುವ ಮತ್ತು ನೋಂದಾಯಿಸಿಕೊಳ್ಳುವ ವಿಮಾ ಕಂಪನಿಗಳು
* ವಿಮಾ ಕಂಪನಿಗಳಿಂದ ನೇಮಕವಾದ ಏಜೆಂಟ್ಗಳಿಂದ ಮಾತ್ರವೇ ವಿಮಾ ಪಾಲಿಸಿಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದೆ.
ನೋಂದಾಯಿತ ವಿಮಾ ಕಂಪನಿಗಳ ಪಟ್ಟಿ:
ಜೀವ ವಿಮೆಗಾರರು:
https://www.irdai.gov.in/ADMINCMS/cms/NormalData_Layout.aspx?page=PageNo129&mid=3.1.9
ಸಾಮಾನ್ಯ ಮತ್ತು ಆರೋಗ್ಯ ವಿಮಾದಾರರು:
https://www.irdai.gov.in/ADMINCMS/cms/NormalData_Layout.aspx?page=PageNo264&mid=3.2.10
ವಿಮಾ ದಲ್ಲಾಳಿಗಳು:
https://www.irdai.gov.in/ADMINCMS/cms/NormalData_Layout.aspx?page=PageNo2120&mid=9.3.7
ವಿಮಾ ಮಾರ್ಕೆಟಿಂಗ್ ಸಂಸ್ಥೆಗಳು:
https://www.irdai.gov.in/ADMINCMS/cms/NormalData_Layout.aspx?page=PageNo2744&mid=9.8.3
ಕಾರ್ಪೊರೇಟ್ ಏಜೆಂಟರು:
https://www.irdai.gov.in/ADMINCMS/cms/NormalData_Layout.aspx?page=PageNo2818&mid=38.2.5
ವೆಬ್ ಅಗ್ರಿಗೇಟರ್ಸ್:
https://www.irdai.gov.in/ADMINCMS/cms/NormalData_Layout.aspx?page=PageNo2337&mid=9.6.1
ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು ಐಆರ್ಡಿಎಐ ಗ್ರಾಹಕ ಶಿಕ್ಷಣ ವೆಬ್ಸೈಟ್ : http://www.policyholder.gov.in/ ಗೆ ಭೇಟಿ ನೀಡುವಂತೆ ಅಥಾರಿಟಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.