
ಆಲಪ್ಪುಝ : ಕೊರೋನಾ ಲಾಕ್ಡೌನ್ ಆರಂಭವಾದಂದಿನಿಂದ ಇಂದಿನವರೆಗೆ ದೇಶದ ಜನರೆಲ್ಲಾ ಮನೆಯೊಳಗಿದ್ದರೆ, ಜನಹಿತ ಕಾಯುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸರು ತಮ್ಮ ಜೀವವನ್ನು ಲೆಕ್ಕಿಸದೆ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೇರಳದ ಆಲಪ್ಪುರ ಜಿಲ್ಲೆಯಲ್ಲಿ ಕೊರೋನಾ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಆಹಾರ, ನೀರು ನೀಡುವ ಮೂಲಕ ಇಲ್ಲಿನ ತೆಂಗಿನಕಾಯಿ ಕೀಳುವ ಕಾರ್ಮಿಕ ಗಿರೀಶ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಕೃತಜ್ಞತೆ ಸಮರ್ಪಿಸುವ ಸಲುವಾಗಿ ಅವರಿಗೆ ಆಹಾರ ಮತ್ತು ನೀರು ಒದಗಿಸುತ್ತಿದ್ದಾರೆ ಗಿರೀಶ್. ಪೊಲೀಸರು ಆರಂಭದಲ್ಲಿ ಗಿರೀಶ್ ಅವರ ಈ ಸೇವೆಯನ್ನು ನಿರಾಕರಿಸಿದರೂ, ಗಿರೀಶ್ ಮಾತ್ರ ಲಾಕ್ಡೌನ್ ಆರಂಭವಾದಂದಿನಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ನಿತ್ಯ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೂ ಬಾಳೆಹಣ್ಣು ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಎಸ್ಐ ಟೋಲ್ಸನ್ ಜೋಸೆಫ್ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಯಾವುದೇ ಅಂಗಡಿ ಅಥವಾ ಹೊಟೇಲ್ಗಳು ತೆರೆದಿರುವುದಿಲ್ಲ. ಕೆಲವೊಮ್ಮೆ ಕೊರೋನಾ ವಾರಿಯರ್ಸ್ಗೆ ಇದರಿಂದಾಗಿ ಆಹಾರ ವಸ್ತುಗಳನ್ನು ದೊರಕಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಆಹಾರ, ನೀರು ಒದಗಿಸುತ್ತಿರುವ ಮೂಲಕ ಗಿರೀಶ್ ಅವರು ತಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಾನ್ಸ್ಟೇಬಲ್ ರಶ್ಮಿ ಅವರು ತಿಳಿಸಿದ್ದಾರೆ.
ತೆಂಗಿನ ಮರ ಏರುವುದರಿಂದಾಗಿ ಗಿರೀಶ್ 100 ಗಳ ಕನಿಷ್ಟ ಆದಾಯ ಗಳಿಸುತ್ತಿದ್ದಾರೆ. ಆದರೆ ಅದರ ನಡುವೆಯೂ ಇಂತಹ ತುರ್ತು ಸಂದರ್ಭದಲ್ಲಿ ತಮ್ಮ ಗಳಿಕೆಯ ಒಂದು ಭಾಗವನ್ನು ಈಗ ಪೊಲೀಸರ ಸೇವೆಗೆ ಬಳಸುತ್ತಾರೆ. ಪೊಲೀಸರ ದೊಡ್ಡ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಹಣ ತನ್ನ ಬಳಿ ಇರದೇ ಇರಬಹುದು. ಆದರೆ, ಅವರಿಗೆ ಬೇಕಾದ ಬಾಳೆಹಣ್ಣು, ನೀರು, ಸೋಡಾ ನೀಡುವ ಕನಿಷ್ಟ ಕೆಲಸವನ್ನು ನಾನು ಮಾಡುವುದು ಸಾಧ್ಯವಿದೆ ಎನ್ನುವ ಗಿರೀಶ್ ಎಲ್ಲರಿಗೂ ಮಾದರಿ ಎನ್ನಬಹುದು.
I see this man travelling in his two-wheeler daily & exchanging pleasantries with cops on duty. When I inquired about him, the police personnel told me that the man is supplying them water & snacks daily: Tolson Joseph, Kalavoor, Sub Inspector #Kerala pic.twitter.com/H9FzsDtwmK
— ANI (@ANI) April 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


