ನವದೆಹಲಿ: ದೇಶದಾದ್ಯಂತ ಕಿಡಿಗೇಡಿಗಳು ಆರೋಗ್ಯ ಸೇವಾ ಕಾರ್ಯಕರ್ತರ ಮೇಲೆ ಹಿಂಸೆಗಳನ್ನು ನಡೆಸುತ್ತಿದ್ದಾರೆ, ಸಾಮಾಜಿಕ ಅಂತರಗಳ ಉಲ್ಲಂಘನೆ ನಡೆಯುತ್ತಿದೆ ಮತ್ತು ನಗರ ಪ್ರದೇಶಗಳಲ್ಲಿ ವಾಹನಗಳ ಸಂಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ಕಟು ಸಂದೇಶವನ್ನು ರವಾನಿಸಿದೆ.
ದೇಶದ ಕೊರೋನಾವೈರಸ್ ಯೋಧರಗಳಿಗೆ ಯಾವುದೇ ರೀತಿಯ ತೊಂದರೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ತಿಳಿಸಿದೆ.
ಸರ್ಕಾರ ಆರು ಮಂದಿಯ ಅಂತರ್ ಸಚಿವರ ತಂಡವನ್ನು ರಚನೆ ಮಾಡಿದ್ದು, ಲಾಕ್ ಡೌನ್ ಉಲ್ಲಂಘನೆಗಳ ಬಗ್ಗೆ ಇದು ಗಮನವನ್ನು ನೀಡಲಿದೆ. ಸಾಂಕ್ರಾಮಿಕ ರೋಗದ ಪಸರಿಸುವಿಕೆಯನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್ಡೌನ್ನ ಉಲ್ಲಂಘನೆಗಳು ನಡೆಯದಂತೆ ನೋಡಿಕೊಳ್ಳಬೇಕು, ಆರೋಗ್ಯ ಸೇವಾ ಕಾರ್ಯಕರ್ತರ ಸುರಕ್ಷತೆಯನ್ನು ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
GoI to States:
Violations to #lockdown measures reported, posing a serious health hazard to public & risk for spread of #COVIDー19:Incidents of violence on frontline healthcare prof; complete violations of social distancing norms; movement of vehicles in urban areas
— Spokesperson, Ministry of Home Affairs (@PIBHomeAffairs) April 20, 2020
ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ ಮತ್ತು ಬೆಂಗಳೂರುಗಳಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳು ದೌರ್ಜನ್ಯಗಳನ್ನು ನಡೆಸಿದ್ದಾರೆ. ಇದು ದೊಡ್ಡ ಆಘಾತವನ್ನು ದೇಶಕ್ಕೆ ನೀಡಿದೆ. ಮಾತ್ರವಲ್ಲದೆ, ಆರೋಗ್ಯ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ಇದಾಗಿದೆ.
ಭಾನುವಾರ ರಾಜ್ಯಗಳಿಗೆ ಬರೆದ ಮತ್ತೊಂದು ಪತ್ರದಲ್ಲಿ, ಕೇಂದ್ರ ಸರಕಾರ ಹೊರಡಿಸಿರುವ ನಿರ್ದೇಶನಗಳನ್ನು ರಾಜ್ಯಗಳು ಉಲ್ಲಂಘನೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.