ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೆರವು ನೀಡಿದ ಭಾರತಕ್ಕೆ ಆಪ್ಘಾನಿಸ್ಥಾನ ಧನ್ಯವಾದಗಳನ್ನು ಅರ್ಪಣೆ ಮಾಡಿದೆ.
ಭಾರತದಲ್ಲಿನ ಆಪ್ಘಾನಿಸ್ಥಾನ ರಾಯಭಾರಿ ತಾಹೀರ್ ಕ್ವಾದಿರಿ ಅವರು ಟ್ವೀಟ್ ಮಾಡಿ, ಭಾರತವು 500,000 ಹೈಡ್ರಾಕ್ಸಿಕ್ಲೋರುಕ್ವಿನ್ ಮಾತ್ರೆಗಳು ಸೇರಿದಂತೆ ಅತ್ಯವಶ್ಯಕ ಔಷಧಿಗಳನ್ನು ಭಾರತ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಡುತ್ತಿದೆ ಎಂದಿದ್ದಾರೆ.
“ಸರಣಿ ಪೂರೈಕೆಯಲ್ಲಿ ಭಾರತವು 100,000 ಪ್ಯಾರಾಸಿಟಮಲ್ ಮತ್ತು 500,000 ಹೈಡ್ರಾಕ್ಸಿಕ್ಲೋರುಕ್ವಿನ್ ಮಾತ್ರೆಗಳನ್ನು ಅರಿಯಾನ ಏರ್ಲೈನ್ಸ್ ಮೂಲಕ ಇಂದು ಆಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಭಾರತವು ಆಹಾರಭದ್ರತೆಯ ಅಡಿಯಲ್ಲಿ ಗೋಧಿಯನ್ನು ಕಳುಹಿಸಿಕೊಟ್ಟಿದ್ದು, ಇದೀಗ ಹೆಚ್ಚುವರಿಯಾಗಿ ಇದನ್ನು ಕಳುಹಿಸಲಾಗಿದೆ. ಹೃತ್ಪೂರ್ವಕ ಧನ್ಯವಾದಗಳು” ಎಂದಿದ್ದಾರೆ.
In a series of offerings of critical drugs, India sent 100,000 paracetamol and 500,000 hydroxychloroquine tablets to #Afghanistan through Ariana Airlines today. This is in addition to the 1st consignment of wheat India shipped earlier to bolster food security. Heartfelt thanks! pic.twitter.com/BWlFdx5G7m
— Tahir Qadiry طاهر قادرى (@tahirqadiry) April 17, 2020
ಆಹಾರ ಭದ್ರತೆಯನ್ನು ಬಲಿಷ್ಟಗೊಳಿಸುವ ಸಲುವಾಗಿ ಭಾರತವು ಈಗಾಗಲೇ ಆಪ್ಘಾನಿಸ್ಥಾನಕ್ಕೆ ಗೋಧಿಯನ್ನು ಕಳುಹಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಹೈಡ್ರಾಕ್ಸಿಕ್ಲೋರುಕ್ವಿನ್ ಔಷಧಿಗಳನ್ನು ಪೂರೈಕೆ ಮಾಡುತ್ತಿರುವ 55 ರಾಷ್ಟ್ರಗಳ ಪಟ್ಟಿಯಲ್ಲಿ ಆಪ್ಘಾನಿಸ್ಥಾನ ಕೂಡ ಇದೆ. ಆಪ್ಘಾನಿಸ್ಥಾನದಲ್ಲಿ ಪ್ರಸ್ತುತ 906 ಕೊರೋನಾವೈರಸ್ ಪ್ರಕರಣಗಳು ದಾಖಲಾಗಿವೆ ಮತ್ತು 30 ಮಂದಿ ಮೃತಪಟ್ಟಿದ್ದಾರೆ.
ಭಾರತವು ಬಹರೈನ್, ಯುಎಇ, ಒಮನ್, ಕುವೈಟ್ಗಳಿಗೂ ಔಷಧಿಯನ್ನು ಪೂರೈಕೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.