ನವದೆಹಲಿ: ಕೊರೋನಾವೈರಸ್ ಎಂಬ ಜಾಗತಿಕ ಮಹಾಮಾರಿ ಎಲ್ಲ ದೇಶಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಭಾರತವು ಎಲ್ಲಾ ದೇಶಗಳಿಗೂ ಔಷಧಿಗಳನ್ನು ಪೂರೈಕೆ ಮಾಡುತ್ತಿದೆ. ಭಾರತದ ಈ ಮಾನವೀಯ ಸಹಾಯಕ್ಕೆ ಎಲ್ಲಾ ದೇಶಗಳು ಕೃತಜ್ಞತೆಗಳನ್ನು ಅರ್ಪಣೆ ಮಾಡುತ್ತಿದೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಿರುವುದಕ್ಕಾಗಿ ರಷ್ಯಾವು ಭಾರತಕ್ಕೆ ಕೃತಜ್ಞವಾಗಿರಲಿದೆ ಎಂದು ಪುಟಿನ್ ಹೇಳಿದ್ದಾರೆ.
ಭಾರತವು ಹೈಡ್ರಾಕ್ಸಿಕ್ಲೋರುಕ್ವಿನ್ ಮತ್ತು ಪ್ಯಾರಾಸಿಟಮಲ್ ಔಷಧಿಗಳನ್ನು ವಿಶ್ವದ ಅನೇಕ ದೇಶಗಳಿಗೆ ಪೂರೈಕೆ ಮಾಡುತ್ತಿದೆ. ಭಾರತವು ಹೈಡ್ರಾಕ್ಸಿಕ್ಲೋರುಕ್ವಿನ್ ಪೂರೈಕೆ ಮಾಡುತ್ತಿರುವ 55 ದೇಶಗಳಲ್ಲಿ ರಷ್ಯಾ ಕೂಡ ಒಂದು. ಕೊರೋನಾವೈರಸ್ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಯಲ್ಲಿ ಔಷಧಿ ಪರಿಣಾಮಕಾರಿ ಎಂದು ನಂಬಲಾಗಿದೆ.
“ರಷ್ಯಾಗೆ ಕೊರೋನಾವೈರಸ್ ವಿರುದ್ಧ ಹೋರಾಡಲು ಔಷಧಿಗಳನ್ನು ಪೂರೈಕೆ ಮಾಡುವ ಭಾರತೀಯ ನಾಯಕತ್ವದ ನಿರ್ಧಾರವು ಉಭಯ ದೇಶಗಳ ಪಾಲುದಾರಿತ್ವದ ಸ್ಫೂರ್ತಿ ತಿನ್ನು ಪ್ರತಿಬಿಂಬಿಸುತ್ತದೆ ಮತ್ತು ಇದನ್ನು ಕೃತಜ್ಞತೆಯೊಂದಿಗೆ ಸ್ವೀಕರಿಸಲಾಗಿದೆ” ಎಂದು ಪುಟಿನ್ ಹೇಳಿದ್ದಾರೆ.
Comments to the Press by President Putin’s Spokesperson, Mr. Dmitry Peskov – “#Russia is grateful to #India for decision to supply medicines to fight #COVID19.”@PMOIndia @narendramodi @DrSJaishankar @MEAIndia @WIONews @IndianDiplomacy @ANI @RusEmbIndia @DDNewslive @DDNewsHindi pic.twitter.com/nL3cXZRCsn
— India in Russia (@IndEmbMoscow) April 17, 2020
“ಮಾಸ್ಕೋ ಭಾರತ ಸರಕಾರದ ಔಷಧಿಗಳನ್ನು ಪೂರೈಸುವ ನಿರ್ಧಾರಕ್ಕೆ ಕೃತಜ್ಞವಾಗಿರುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಉಭಯ ದೇಶಗಳ ಸಹಕಾರದ ನಿಟ್ಟಿನಲ್ಲಿ ಇದು ಪರಿಣಾಮಕಾರಿ ಹೆಜ್ಜೆಯಾಗಿದೆ” ಎಂದಿದ್ದಾರೆ.
ಮಾರ್ಚ್ 25ರಂದು ಪುಟಿನ್ ಮತ್ತು ಮೋದಿ ಅವರು ದೂರವಾಣಿ ಸಂಭಾಷಣೆಯ ಮೂಲಕ ಮಾತುಕತೆಯನ್ನೂ ನಡೆಸಿದ್ದರು. ಆ ಬಳಿಕ ಭಾರತ-ರಷ್ಯಾ ಔಷಧಿಗಳನ್ನು ಪೂರೈಸಲು ಮುಂದಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.