ತಿರುವನಂತಪುರ: ಕೇರಳದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಿರುವನಂತಪುರನ ಶ್ರೀ ಚಿತ್ರ ತಿರುನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ ಮತ್ತು ಟೆಕ್ನಾಲಜಿ ಸಂಸ್ಥೆ ಅತಿ ಕಡಿಮೆ.ವೆಚ್ಚದಲ್ಲಿ ಕೇವಲ 2 ಗಂಟೆಗಳಲ್ಲಿಯೇ ಕೊರೋನಾ ಪತ್ತೆ ಹಚ್ಚುವ ಟೆಸ್ಟಿಂಗ್ ಕಿಟ್ ಅನ್ನು ಅಭಿವೃದ್ಧಿ ಮಾಡಿದೆ.
ಆರ್ಟಿ ಲ್ಯಾಂಪ್ ಆಮ್ಲದ ರಿವರ್ಸ್ ಟ್ರಾನ್ಸ್ ಸ್ಕ್ರಿಪ್ಟೇಸ್ ಲೂಪ್ ನ ಆರ್ ಎ ಆರ್ ಎಸ್ – ಸಿಒವಿ 2 ಜೀನ್ ಅನ್ನು ಪತ್ತೆಹಚ್ಚುವ ಮೂಲಕ ಇದು ರೋಗ ನಿರ್ಣಯ ಮಾಡುತ್ತದೆ. ಇದು ವಿಶ್ವದ ಮೊದಲ ಕೋವಿಡ್ ಕಂಡು ಹಿಡಿಯುವ ಕಿಟ್ ಅಲ್ಲದಿದ್ದರೂ ಕಡಿಮೆ ವೆಚ್ಚದಲ್ಲಿ ರೋಗ ನಿರ್ಣಯ ಮಾಡುವ ಕಿಟ್ ಇದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಈ ಕಿಟ್ ಗೆ ” ಚಿತ್ರಾ ಜೀನ್ ಲ್ಯಾಂಪ್- ಎನ್” ಎಂದು ಹೆಸರು ನೀಡಲಾಗಿದೆ. ಎನ್ಐವಿ ಆಳಪ್ಪುರದಲ್ಲಿ ಈ ಕಿಟ್ ಬಳಸಿ ಪರೀಕ್ಷೆ ನಡೆಸಲಾಗಿದ್ದು 100% ನಿಖರ ಫಲಿತಾಂಶ ನೀಡಿದೆ. ಈ ಪರೀಕ್ಷಾ ವರದಿ ಮತ್ತು ಆರ್ಟಿಪಿಸಿಆರ್ ನಡೆಸಿದ ಪರೀಕ್ಷೆಗಳೆರಡರ ವರದಿಯಲ್ಲಿಯೂ ಸಾಮ್ಯತೆ ಇದ್ದದ್ದೇ ಇದಕ್ಕೆ ಪುಷ್ಟಿ ನೀಡುವುದಾಗಿಯೂ ಸಚಿವಾಲಯ ತಿಳಿಸಿದೆ. ಈ ಕಿಟ್ ಅನ್ನು ಸರ್ಕಾರದ ಅನುಮತಿಗಾಗಿ ಐಸಿಎಂಆರ್ ಗೆ ಕಳುಹಿಸಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.
ಈ ಕಿಟ್ನಲ್ಲಿ ಕೊರೋನಾ ಪತ್ತೆಗೆ 10 ನಿಮಿಷ ಹಿಡಿಯುತ್ತದೆ ಮತ್ತು ಫಲಿತಾಂಶ ಎರಡು ಗಂಟೆಯೊಳಗೆ ದೊರೆಯುತ್ತದೆ. ಯಂತ್ರದ ಒಂದೇ ಬ್ಯಾಚ್ನಲ್ಲಿ ಸುಮಾರು 30 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. 1000 ರೂ. ಗಳೊಳಗೆ ಕೊರೋನಾ ಪರೀಕ್ಷೆ ಮುಗಿಸುವ ಈ ಕಿಟ್ ಅನ್ನು ವಿಜ್ಞಾನಿ ಡಾ. ಅನೂಪ್ ತೆಕ್ಕುವೆಟ್ಟಿಲ್ ಅವರ ತಂಡ ಮೂರು ವಾರಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಇನ್ನು ಈ ಕಿಟ್ ಅನ್ನು ತಯಾರಿಸಲು ಮುಂದೆ ಬರುವ ಕಂಪನಿಗಳನ್ನು ಉತ್ತೇಜಿಸುವ ಸಲುವಾಗಿ ಪರವಾನಗಿ ಶುಲ್ಕ ಕಡಿತಗೊಳಿಸಲಾಗುವುದಾಗಿಯೂ ಶ್ರೀ ಚಿತ್ರ ತಿರುನಲ್ ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.