ನವದೆಹಲಿ : ದೇಶದ ಜಿಹಾದಿ, ಹುಸಿ ಸೆಕ್ಯೂಲರ್ವಾದಿಗಳ ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್ ಮೇಲೆ ಮುಗಿದುಬಿದ್ದಿರುವ ಕುಸ್ತಿಪಟು ಬಬಿತಾ ಫೋಗಟ್ ನಿಮ್ಮ ಬೆದರಿಕೆಗಳಿಗೆ ಹೆದರಲು ನಾನು ಜೈರಾ ವಾಸಿಮ್ ಅಲ್ಲ ಎಂದು ಗುಡುಗಿದ್ದಾರೆ.
ಜಾಮಾತಿಗಳ ಕುರಿತಾಗಿ ತಾನು ಹೇಳಿರುವುದು ಸತ್ಯವಾಗಿದ್ದು ಇದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಬಿತಾ ಹೇಳಿಕೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹುಸಿ ಸೆಕ್ಯೂಲರ್ವಾದಿಗಳು, ತುಕ್ಡೆ ತುಕ್ಡೆ ಗ್ಯಾಂಗ್ನವರು ಸೋಶಿಯಲ್ ಮೀಡಿಯಾದಲ್ಲಿ ಬಬೀತಾ ಫೋಗಟ್ ಅವರನ್ನು ಗುರಿಯಾಗಿಸಿದ್ದರು.
ಇದಕ್ಕೆ ತಕ್ಕ ಉತ್ತರ ನೀಡಿರುವ ಬಬೀತಾ “ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಬಗ್ಗೆ ಸುಳ್ಳು ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ, ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಎಂದು ಬಬಿತಾ ಫೋಗಟ್ ಹೇಳಿದ್ದಾರೆ. ನಾನು ನಿಮ್ಮ ಬೆದರಿಕೆಗಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳಲು ನಾನು ಜೈರಾ ವಾಸಿಮ್ ಅಲ್ಲ ಎಂಬುದನ್ನು ನೆನಪಿಡಿ. ನಾನು ಬಬಿತಾ ಫೋಗಟ್. ನಾನು ಯಾವಾಗಲೂ ನನ್ನ ದೇಶಕ್ಕಾಗಿ ಹೋರಾಡಿದ್ದೇನೆ ಮತ್ತು ಈ ರೀತಿ ಹೋರಾಡುತ್ತೇನೆ.
ನಾನು ಟ್ವೀಟ್ ಮಾಡಿರುವ ವಿಷಯದಲ್ಲಿ ನಾನು ಯಾವುದೇ ತಪ್ಪು ಬರೆದಿಲ್ಲ. ನನ್ನ ಟ್ವೀಟ್ಗೆ ನಾನು ಬದ್ಧಳಾಗಿದ್ದೇನೆ. ಕೊರೋನಾ ಸೋಂಕನ್ನು ಹರಡುವ ಜನರ ಬಗ್ಗೆ ನಾನು ಬರೆದಿದ್ದೇನೆ. ತಬ್ಲಿಘಿ ಜಮಾತ್ ಸಂಕ್ರಾಮಿಕ ಹರಡುವುದರಲ್ಲಿ ಇನ್ನೂ ಪ್ರಥಮ ಸ್ಥಾನದಲ್ಲಿಲ್ಲವೇ? ಜಮಾತ್ ಕೊರೋನಾ ಸೋಂಕನ್ನು ಹರಡದಿದ್ದರೆ, ಲಾಕ್ಡೌನ್ ತೆರೆಯಬಹುದಿತ್ತು. ಕೊರೋನಾವನ್ನು ಸೋಲಿಸಬಹುದಿತ್ತು. ಈ ಜನರಿಗೆ ಸತ್ಯವನ್ನು ಕೇಳುವಲ್ಲಿ ಸಮಸ್ಯೆಗಳಿವೆ. ನಾನು ಯಾವಾಗಲೂ ಸತ್ಯವನ್ನು ಹೇಳುತ್ತೇನೆ. ನಿಮಗೆ ಸತ್ಯವನ್ನು ಕೇಳುವುದು ಇಷ್ಟವಿಲ್ಲದಿದ್ದರೆ, ನಿಮ್ಮ ಅಭ್ಯಾಸವನ್ನು ಸುಧಾರಿಸಿ ಅಥವಾ ಸತ್ಯವನ್ನು ಕೇಳಲು ಅಭ್ಯಾಸ ಮಾಡಿಕೊಳ್ಳಿ” ಎಂದು ಬಬೀತಾ ಹೇಳಿದ್ದಾರೆ.
यदि आप बबीता फोगाट को सपोर्ट करते हैं तो उन तक यह बात जरूर पहुंचा दीजिए और उनको बोलिए ध्यान से कान खोल कर सुन लें। pic.twitter.com/gqec3lQwPE
— Babita Phogat (@BabitaPhogat) April 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.