ವಾಷಿಂಗ್ಟನ್ : ಅಮೇರಿಕಾ ವಿಶ್ವಕ್ಕೇ ದೊಡ್ಡಣ್ಣ ಎಂದು ಹೆಸರು ಪಡೆದುಕೊಂಡರೂ ಭಾರತದ, ಅದರಲ್ಲೂ ಪ್ರಧಾನಿ ಮೋದಿ ಜೊತೆಗೆ ಸ್ನೇಹಪರ ಸಂಬಂಧವನ್ನು ಹೊಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾದ ಅಧಿಕೃತ ಅಧ್ಯಕ್ಷರ ಭವನವಾಗಿರುವ ಶ್ವೇತ ಭವನ ತನ್ನ ಟ್ವಿಟ್ಟರ್ ಅಕೌಂಟ್ನಲ್ಲಿ ಮೋದಿ ಅವರನ್ನು ಫಾಲೋ ಮಾಡುತ್ತಿರುವುದು.
ಇದರಲ್ಲೇನು ವಿಶೇಷ ಅಂದಿರಾ. ವಿಶೇಷ ಇದೆ. ಅದೇನೆಂದರೆ ಶ್ವೇತ ಭವನ ಕೇವಲ 19 ಟ್ವಿಟ್ಟರ್ ಅಕೌಂಟ್ಗಳನ್ನು ಮಾತ್ರವೇ ಫಾಲೋ ಮಾಡುತ್ತಿದ್ದು ಅದರಲ್ಲಿ ವಿಶ್ವದ ಅನೇಕ ನಾಯಕರಲ್ಲಿ ಮೋದಿ ಅವರನ್ನು ಮಾತ್ರವೇ ಫಾಲೋ ಮಾಡುತ್ತಿದೆ. ಮೋದಿ ಅವರ ಅಫೀಶಿಯಲ್ ಖಾತೆಗಳು ಮತ್ತು ಒಂದು ಪರ್ಸನಲ್ ಅಕೌಂಟ್ ಒಟ್ಟಾಗಿ ಮೋದಿ ಅವರಿಗೆ ಸಂಬಂಧಿಸಿದಂತೆ ಮೂರು ಅಕೌಂಟ್ಗಳನ್ನು ಮತ್ತು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಫೀಶಿಯಲ್ ಖಾತೆ, ಹಾಗೆಯೇ ನವ ದೆಹಲಿಯ ಅಮೆರಿಕಾದ ರಾಯಭಾರಿ ಕಛೇರಿಯ 2 ಖಾತೆಗಳನ್ನು ಶ್ವೇತ ಭವನದ ಅಧಿಕೃತ ಟ್ವಿಟ್ಟರ್ ಖಾತೆ ಫಾಲೋ ಮಾಡುತ್ತಿದೆ. ಮೋದಿ ಮತ್ತು ಕೋವಿಂದ್ ಅವರನ್ನು ಹೊರತುಪಡಿಸಿ ವಿಶ್ವದ ಇನ್ಯಾವ ನಾಯಕರನ್ನೂ ಶ್ವೇತ ಭವನ ಫಾಲೋ ಮಾಡುತ್ತಿಲ್ಲ ಎಂಬುದೇ ಈ ಎರಡು ರಾಷ್ಟ್ರಗಳ ಸಂಬಂಧವನ್ನು ತಿಳಿಸುತ್ತದೆ.
ಇನ್ನು ಟ್ವಿಟ್ಟರ್ನಲ್ಲಿ 42 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಮೋದಿ ಮೂರನೇಯ ಸ್ಥಾನದಲ್ಲಿದ್ದರೆ, ಟ್ರಂಪ್ ಮತ್ತು ಪೋಪ್ ಪ್ರಾನ್ಸಿಸ್ ಅವರು ಕ್ರಮವಾಗಿ ಮೊದಲು ಮತ್ತು ಎರಡನೇಯ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.