ನವದೆಹಲಿ : ಕೊರೋನಾ ಜಗತ್ತಿನ ತುಂಬೆಲ್ಲಾ ರಣ ಕೇಕೆಯನ್ನು ಹಾಕುತ್ತಿದೆ. ಈ ಸೋಂಕಿನಿಂದ ಜನರನ್ನು ಕಾಪಾಡುವುದು ಹೇಗೆಂದು ತಿಳಿಯದೆ ಪ್ರಪಂಚದ ಎಲ್ಲಾ ದೇಶಗಳೂ ಕಂಗಾಲಾಗಿವೆ. ಈ ನಡುವೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಇನ್ನಿತರ ಅಗತ್ಯ ಔಷಧ ಪೂರೈಕೆಗಾಗಿ ಜಗತ್ತಿನ ಹಲವು ರಾಷ್ಟ್ರಗಳು ಭಾರತಕ್ಕೆ ಮನವಿ ಮಾಡಿದ್ದು, ಇಸ್ರೇಲ್ ಸಹ ಔಷಧಗಳನ್ನು ರಫ್ತು ಮಾಡುವಂತೆ ಭಾರತದ ಜೊತೆ ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಗತ್ಯ ಹೈಡ್ರಾಕ್ಸಿಕ್ಲೋರೋಕ್ವಿನ್ ಜೊತೆಗೆ ಮತ್ತಷ್ಟು ಅಗತ್ಯ 5 ಟನ್ ನಷ್ಟು ಔಷಧಗಳನ್ನು ಇಸ್ರೇಲ್ಗೆ ಕಳುಹಿಸಿ ಮಾನವೀಯತೆ ಮೆರೆದಿದೆ.
ಪ್ರಧಾನಿ ಅವರ ಈ ಗುಣವನ್ನು ಮೆಚ್ಚಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಇಸ್ರೇಲ್ ದೇಶವಾಸಿಗಳ ಪರವಾಗಿ ಭಾರತಕ್ಕೆ ಮತ್ತು ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಈ ಹಿಂದೆ ಅಮೇರಿಕಾ ಮತ್ತು ಬ್ರೆಜಿಲ್ ಸಹ ಅಗತ್ಯ ಔಷಧೀಯ ವಸ್ತುಗಳನ್ನು ಸರಬರಾಜು ಮಾಡಿದ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದರು. ಇದೀಗ ಇಸ್ರೇಲ್ ಸಹ ಮೋದಿ ಅವರ ಕಾರ್ಯವನ್ನು ಮೆಚ್ಚಿ ಧನ್ಯವಾದ ಸಮರ್ಪಿಸಿದೆ.
Thank you, my dear friend @narendramodi, Prime Minister of India, for sending Chloroquine to Israel.
All the citizens of Israel thank you! 🇮🇱🇮🇳 pic.twitter.com/HdASKYzcK4
— PM of Israel (@IsraeliPM) April 9, 2020
ಕೊರೋನಾ ವೈರಸ್ ಕಾಟಕ್ಕೆ ಇಸ್ರೇಲ್ ಕಂಗಾಲಾಗಿದ್ದು, ಈ ವರೆಗೆ ಸುಮಾರು 10000 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ 86 ಮಂದಿ ಗುಣಮುಖರಾಗಿದ್ದು, 121 ಮಂದಿಯ ಸ್ಥಿತಿ ಗಂಭೀರವಾಗಿದೆ.
ಇನ್ನು ಈ ಬಗ್ಗೆ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಈ ಸೋಂಕಿನ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಮಿತ್ರ ರಾಷ್ಟ್ರಗಳಿಗೆ ಸಾಧ್ಯವಾದ ಮಟ್ಟಿಗೆ ನೆರವು ನೀಡುವುದಕ್ಕೆ ಭಾರತ ಎಂದೂ ಸಿದ್ಧವಾಗಿದ್ದು, ಇಸ್ರೇಲ್ನ ಜನರ ಆರೋಗ್ಯಕ್ಕಾಗಿಯೂ ಪ್ರಾರ್ಥಿಸುವುದಾಗಿ ತಿಳಿಸುವ ಮೂಲಕ ನೆರವಿನ ಭರವಸೆ ತುಂಬಿದ್ದಾರೆ.
We have to jointly fight this pandemic.
India is ready to do whatever is possible to help our friends.
Praying for the well-being and good health of the people of Israel. @netanyahu https://t.co/jChdGbMnfH
— Narendra Modi (@narendramodi) April 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.