ನವದೆಹಲಿ: ಕೊರೋನಾ ಸೋಂಕಿನಿಂದ ದೇಶವನ್ನು ಕೇಂದ್ರ ಸರ್ಕಾರ ಲಾಕ್ಡೌನ್ ಮಾಡಿದ್ದು, ಲಾಕ್ಡೌನ್ ತೆರವಾದ ಕೂಡಲೇ ಭಾರತೀಯ ರೈಲ್ವೇ ಸೇವೆಗಳನ್ನು ತಕ್ಷಣವೇ ಮತ್ತೆ ಆರಂಭಿಸಲಾಗುತ್ತದೆ ಎಂಬ ಸುದ್ದಿಯನ್ನು ರೈಲ್ವೇ ಇಲಾಖೆ ತಳ್ಳಿ ಹಾಕಿದೆ. ಎ. 14 ಕ್ಕೆ ಲಾಕ್ಡೌನ್ ಅಂತ್ಯವಾದ ಕೂಡಲೇ ರೈಲ್ವೇ ಸೇವೆಗಳನ್ನು ಮತ್ತೆ ಆರಂಭಿಸುವ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂಬುದನ್ನೂ ಭಾರತೀಯ ರೈಲ್ವೇ ಸ್ಪಷ್ಟಪಡಿಸಿದೆ.
ಲಾಕ್ಡೌನ್ ಮುಗಿದ ತಕ್ಷಣ ರೈಲ್ವೇ ಇಲಾಖೆ ತನ್ನ ಸೇವೆಗಳನ್ನು ಆರಂಭಿಸಲು ಸಿದ್ಧತೆಗಳನ್ನು ನಡೆಸಿದೆ ಎಂಬ ಸುಳ್ಳು ಸುದ್ದಿಗಳನ್ನು ಕೆಲವೊಂದು ಮಾಧ್ಯಮಗಳು ಪ್ರಕಟಿಸಿ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಆದರೆ ಈ ಕುರಿತಂತೆ ಇಲಾಖೆ ಯಾವುದೇ ಕ್ರಮಗಳನ್ನು, ಸಿದ್ಧತೆಗಳನ್ನು ನಡೆಸಿಲ್ಲ. ಲಾಕ್ಡೌನ್ ತೆರವು ಮಾಡಿದ ಬಳಿಕವಷ್ಟೇ ಈ ಬಗ್ಗೆ ಸಿದ್ಧತೆಗಳನ್ನು ನಡೆಸಲಾಗುವುದು ಎಂಬುದನ್ನೂ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈಗಾಗಲೇ ತಿಳಿಸಿದೆ. ಅಲ್ಲದೆ ಇಂತಹ ಯಾವುದೇ ಅಧಿಕೃತ ಮಾಹಿತಿಗಳಿದ್ದರೂ ಅದನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
Certain media reports have come on a post lockdown “restoration plan” with train details,frequency etc. It is to clarify that no such plan regarding the resumption of passenger services has been issued.All concerned would be duly informed about any further decision in this regard
— Ministry of Railways (@RailMinIndia) April 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.