ಮಾರ್ಚ್ 24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸುವ ಸಲುವಾಗಿ 21 ದಿನಗಳ ದೇಶವ್ಯಾಪಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ್ದರು. ಜಗತ್ತಿನ ಹಲವಾರು ರಾಷ್ಟ್ರಗಳು ಲಾಕ್ ಡೌನ್ ಅನ್ನು ಘೋಷಣೆ ಮಾಡಲು ಹಿಂದು ಮುಂದು ನೋಡಿವೆ. ಯಾಕೆಂದರೆ ಆರ್ಥಿಕತೆಯ ಮೇಲೆ ಈ ನಿರ್ಧಾರ ದೊಡ್ಡಮಟ್ಟದ ಹೊಡೆತವನ್ನು ನೀಡುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಸಾಂಕ್ರಾಮಿಕ ರೋಗ ಹರಡುವ ಪ್ರಾಥಮಿಕ ಹಂತದಲ್ಲೇ ದೇಶವ್ಯಾಪಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿ ಇಡಿ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದರು. ತನ್ನ ನಾಗರಿಕರನ್ನು ರಕ್ಷಣೆ ಮಾಡಿಕೊಳ್ಳಲು ಇದು ಅತ್ಯಂತ ಅನಿವಾರ್ಯ ಮತ್ತು ದಿಟ್ಟ ನಿರ್ಧಾರವಾಗಿತ್ತು.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಮೋದಿಯವರು ಯಾರೊಬ್ಬರೂ ಕೂಡ ಲಕ್ಷ್ಮಣರೇಖೆಯನ್ನು ದಾಟಬಾರದು ಎಂದು ಹೇಳಿದ್ದರು. ಅಂದರೆ ಮನೆಯಿಂದ ಯಾರೂ ಕೂಡ ನಿಯಮವನ್ನು ಉಲ್ಲಂಘಿಸಿ ಬರಬಾರದು ಎಂದು ಅವರು ಕೇಳಿಕೊಂಡಿದ್ದರು. ಲಕ್ಷ್ಮಣರೇಖೆ ಎಂಬುದು ರಾಮಾಯಣದಲ್ಲಿ ಅತ್ಯಂತ ಜನಪ್ರಿಯವಾದ ಮಾತಾಗಿದೆ. ಜೀವನಕ್ಕೆ ಇದು ಅತ್ಯಂತ ಮಹತ್ವದ ಸಂದೇಶವನ್ನು ಕೂಡ ನೀಡುತ್ತದೆ.
14 ವರ್ಷಗಳ ವನವಾಸವಿದ್ದ ಸಂದರ್ಭದಲ್ಲಿ, ಸೀತಾ ಮಾತೆಯು ಬಂಗಾರದ ಜಿಂಕೆಯನ್ನು ಕಂಡು ಮೋಹಿತಳಾಗುತ್ತಾಳೆ. ಈ ವೇಳೆ ರಾಮ ಸೀತೆಗಾಗಿ ಜಿಂಕೆಯನ್ನು ಬೇಟೆಯಾಡಲು ತೆರಳುತ್ತಾನೆ. ರಾಮ ಹಿಂದಿರುಗಿ ಬಾರದ್ದನ್ನು ನೋಡಿ ಸೀತೆ ಲಕ್ಷ್ಮಣನನ್ನು ರಾಮನನ್ನು ಹುಡುಕಲು ಕಳುಹಿಸುತ್ತಾಳೆ. ಈ ವೇಳೆ ಲಕ್ಷ್ಮಣ ಒಂದು ಗೆರೆಯನ್ನು ಎಳೆದು, ಇದನ್ನು ದಾಟಿ ಹೊರಬಾರದಂತೆ ಸೀತೆಗೆ ಸೂಚನೆಯನ್ನು ನೀಡುತ್ತಾನೆ. ಆದರೆ ರಾವಣ ಭಿಕ್ಷುಕನ ರೂಪದಲ್ಲಿ ಬಂದು ಭಿಕ್ಷೆ ಕೇಳಿದ ಸಂದರ್ಭದಲ್ಲಿ ಸೀತೆ ಆ ಗೆರೆಯನ್ನು ದಾಟಿ ಮುಂದೆ ಬರುತ್ತಾಳೆ. ಈ ಸಂದರ್ಭದಲ್ಲಿ ರಾವಣ ಆಕೆಯನ್ನು ಅಪಹರಿಸುತ್ತಾನೆ. ನಂತರ ದೊಡ್ಡ ಸಂಘರ್ಷವೇ ನಡೆಯುತ್ತದೆ, ಅದೆಲ್ಲಾ ಇದೀಗ ಇತಿಹಾಸ.
ಸೀತೆಗೆ ಅಪಾಯದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಆಕೆ ಗೆರೆಯನ್ನು ದಾಟಿ ದೊಡ್ಡ ಅಪಾಯವನ್ನು ತಂದಿಟ್ಟುಕೊಂಡಳು. ಅದೇ ರೀತಿ ಪ್ರಸ್ತುತ ವಿಧಿಸಲಾಗಿರುವ ಲಾಕ್ ಡೌನ್ ಅನ್ನು ನಾವು ಉಲ್ಲಂಘಿಸಿದರೆ ದೊಡ್ಡ ಗಂಡಾಂತರವನ್ನೇ ಸೃಷ್ಟಿ ಮಾಡುತ್ತೇವೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷ್ಮಣರೇಖೆಯನ್ನು ಮೀರದಂತೆ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಸರಪಣಿಯನ್ನು ಮುರಿಯಲು ಲಾಕ್ ಡೌನ್ ಅತ್ಯಂತ ಪ್ರಮುಖವಾದ ಮಾರ್ಗವಾದ ಮಾರ್ಗವಾಗಿದೆ. ನಾವಿದನ್ನು ಪಾಲಿಸಲೇ ಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.