ಬೆಂಗಳೂರು: ಕೊರೋನವೈರಸ್ ಮುಂಜಾಗ್ರತಾ ಕ್ರಮವಾಗಿ ಹಲವಾರು ಮಂದಿಯನ್ನು ರಾಜ್ಯದಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆದರೆ ಕೆಲವರು ಕ್ವಾರಂಟೈನ್ ಅನ್ನು ಮುರಿದು ಬೇಕಾಬಿಟ್ಟಿಯಾಗಿ ತಿರುಗುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಅದೇನೆಂದರೆ ಕ್ವಾರಂಟೈನ್ನಲ್ಲಿದ್ದವರು ಗಂಟೆಗೊಂದು ಸೆಲ್ಫಿಗಳನ್ನು ತೆಗೆದು ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಅಂದರೆ ದಿನಕ್ಕೆ 15 ಸೆಲ್ಫಿಗಳನ್ನು ತೆಗೆದು ಕಳುಹಿಸಬೇಕಾಗುತ್ತದೆ. 14 ದಿನಗಳ ಅವಧಿಯಲ್ಲಿ ಒಟ್ಟು 210 ಸೆಲ್ಫಿಗಳನ್ನು ಕಳುಹಿಸಿಕೊಡಬೇಕು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ಸಹಿಯುಳ್ಳ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಮಲಗುವ ಅವಧಿಯಾದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 7 ಗಂಟೆ ತನಕ ಸೆಲ್ಫಿ ಕಳುಹಿಸಿ ಕೊಡಬೇಕಾದ ಅಗತ್ಯವಿಲ್ಲ.
ಒಂದು ವೇಳೆ ಗಂಟೆಗೊಂದರಂತೆ ಸೆಲ್ಪಿ ಕಳುಹಿಸಿ ಕೊಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೇರವಾಗಿ ಮನೆಗೆ ಬಂದು ಪರಿಶೀಲನೆ ನಡೆಸಲಿದ್ದಾರೆ ಮತ್ತು ಅವರನ್ನು ಸರ್ಕಾರದ ಕ್ವಾರೆಂಟೈನ್ಗೆ ಸ್ಥಳಾಂತರ ಮಾಡಲಿದ್ದಾರೆ.
A selfie an hour, will keep the police away! As many #HomeQuarantined are stepping out, the Quarantine Watch Mobile App requires these citizens to send a selfie every waking hour. If the GPS coordinates change, they will be sent to a Govt-run mass quarantine centre.#StayHome pic.twitter.com/Ofo9t80P9G
— B.H.Anil Kumar,IAS (@BBMPCOMM) March 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.