ನವದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹ್ಯಾಂಡ್ ಸ್ಯಾನಿಟೈಝರ್ ಮತ್ತು ವೆಂಟಿಲೇಟರ್ಗಳು ಸೇರಿದಂತೆ ನಾಲ್ಕು ವಿಭಿನ್ನ ವಸ್ತುಗಳನ್ನು ಕರೋನಾ ವಿರುದ್ಧದ ಯುದ್ಧದಲ್ಲಿ ನಿಯೋಜಿಸಲು ಸಿದ್ಧವಾಗಿದೆ.
COVID-19 ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮೂಲ ಸಾಧನವಾಗಿದೆ ಎಂದು ರಕ್ಷಣಾ ಸಚಿವಾಲಯವು ಹೇಳಿದೆ. ಈ ಹಿನ್ನೆಲೆಯಲ್ಲಿ ಡಿಆರ್ಡಿಒದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಪ್ರಮುಖ ಕಚೇರಿಗಳು ಮತ್ತು ಸಂಸ್ಥೆಗಳಿಗೆ ವಿತರಿಸಲಾಗುತ್ತಿದೆ.
ಡಿಆರ್ಡಿಒ ಲ್ಯಾಬ್ ಆದ ಡಿಫೆನ್ಸ್ ಬಯೋ ಎಂಜಿನಿಯರಿಂಗ್ ಆಂಡ್ ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ನಿರ್ಣಾಯಕ ಆರೈಕೆ ವೆಂಟಿಲೇಟರ್ ತಯಾರಕನಾಗಿ ನಿಯೋಜಿತವಾಗಿದೆ. ಈ ಇನ್ನೋವೇಶನ್ ಒಂದು ವಾರದೊಳಗೆ ಲಭ್ಯವಾಗಲಿದೆ. ಮೊದಲ ತಿಂಗಳಲ್ಲಿ ಸುಮಾರು 5,000 ವೆಂಟಿಲೇಟರ್ಗಳನ್ನು ಉತ್ಪಾದಿಸಲಾಗುವುದು ಮತ್ತು ತರುವಾಯ 10,000 ತಯಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಆರ್ಡಿಒ ಅಭಿವೃದ್ಧಿಪಡಿಸಿದ ಎರಡು ಪದರಗಳ ನ್ಯಾನೊ ಮೆಶ್ವೊಂದಿಗೆ 5 ಲೇಯರ್ ಒಳಗೊಂಡ ಎನ್ 99 ಮುಖಗವಸುಗಳು ಕೂಡ ಇಲ್ಲಿ ತಯಾರಾಗಲಿವೆ. ಇದು ಅತ್ಯಾಧುನಿಕ ಮತ್ತು ಸೋಂಕು ನಿರೋಧಕವಾಗಿರಲಿದೆ.
ಈ ಮೊದಲು, ರೇಡಿಯೊಲಾಜಿಕಲ್ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಮತ್ತು ಸ್ಥಳಾಂತರಿಸಲು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಡಿಆರ್ಡಿಒ ಈ ಬಾಡಿ ಸೂಟ್ ಅನ್ನು ಅಭಿವೃದ್ಧಿಪಡಿಸಿತ್ತು, ಇದೀಗ ಅದನ್ನು ವೈರಸ್ ತಡೆಯಲು ಪೂರ್ಣ ದೇಹದ ಸೂಟ್ ಆಗಿ ಪರಿವರ್ತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.