ವಾಷಿಂಗ್ಟನ್ : ಜಗತ್ತಿನ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕ ಈಗ ಅಕ್ಷರಶಃ ತತ್ತರಿಸಿ ಹೋಗಿದೆ. ಕೊರೋನವೈರಸ್ ಮಹಾಮಾರಿ ಆ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪ್ರಸ್ತುತ ಅಲ್ಲಿ ದಾಖಲಾದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 85,840.
ಕೊರೋನಾವೈರಸ್ ಕೇಂದ್ರಬಿಂದುವಾಗಿರುವ ಚೀನಾವನ್ನೇ ಅಮೆರಿಕ ಹಿಂದಿಕ್ಕಿದೆ. ಈಗಾಗಲೇ ಅಮೆರಿಕಾದ ಸಾವಿನ ಸಂಖ್ಯೆ ಸಾವಿರವನ್ನೂ ಮೀರಿದೆ.
ಪ್ರಸ್ತುತ ಅಮೇರಿಕದ ನ್ಯೂಯಾರ್ಕ್ ಸಾಂಕ್ರಾಮಿಕತೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಈ ಪ್ರದೇಶದಲ್ಲಿ ಒಟ್ಟು 37,802 ಪ್ರಕರಣಗಳು ದಾಖಲಾಗಿದೆ.
ಸ್ಪೇನ್ನಲ್ಲೂ ಕೂಡ ಕರೋನವೈರಸ್ ಮಹಾಮಾರಿ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಇದುವರೆಗೆ ಎಲ್ಲಿ 4365 ಸಾವುಗಳು ಸಂಭವಿಸಿದೆ.
ಒಟ್ಟಿನಲ್ಲಿ ಕೊರೋನವೈರಸ್ ಮಹಾಮಾರಿಯು ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಅಲುಗಾಡಿಸುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಅಮೆರಿಕ ಕೂಡ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲಾಗದೆ ಕೈಚೆಲ್ಲುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.