ಚೆನ್ನೈ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಚೆನ್ನೈ ಮಹಾನಗರ ಪಾಲಿಕೆಯು ಸೋಂಕು ನಿವಾರಕಗಳು ಸಿಂಪಡಣೆಗೆ ಪರಿಕರಗಳನ್ನು ಮತ್ತು ವಾಹಕಗಳನ್ನು ನಿಯೋಜನೆಗೊಳಿಸಿದೆ. ಡ್ರೋನ್ಗಳ ಮೂಲಕ ಅದು ಸೋಂಕುನಿವಾರಕವನ್ನು ಸಿಂಪಡಣೆ ಮಾಡುತ್ತಿದೆ.
ಪ್ರತಿ ಡ್ರೋನ್ಗಳು ಸುಮಾರು 50 ಸಾವಿರ ಅಡಿಗಳಲ್ಲಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡುತ್ತಿದೆ. ಸಿಂಪಡಣೆಗಳನ್ನು ಮಾಡುವಂತಹ ಟ್ರಕ್ ಮತ್ತು ಟ್ರ್ಯಾಕ್ಟರ್ಗಳನ್ನು ಕೂಡ ನಿಯೋಜನೆ ಮಾಡಲಾಗಿದೆ. ಇವುಗಳನ್ನು ಬಳಕೆ ಮಾಡಲು ಅತ್ಯಂತ ಕಡಿಮೆ ಅವಧಿಯಲ್ಲಿ ಸಿಬ್ಬಂದಿಗಳಿಗೆ ತರಬೇತಿಯನ್ನೂ ನೀಡಲಾಗಿದೆ.
ಡ್ರೋನ್ಗಳು ಸುಮಾರು 150 ಅಡಿ ಎತ್ತರದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡುತ್ತವೆ. 50 ಸಾವಿರ ಚದರ ಅಡಿ ಪ್ರದೇಶದಲ್ಲಿ ಒಂದು ಡ್ರೋನ್ ಸಿಂಪಡಣೆ ಮಾಡುತ್ತದೆ.
ಅಣ್ಣಾ ವಿಶ್ವವಿದ್ಯಾಲಯ ಈ ಡ್ರೋನ್ಗಳನ್ನು ಅಭಿವೃದ್ಧಿಪಡಿಸಿದೆ. ಪ್ರತಿ ಡ್ರೋನ್ 16 ಲೀಟರ್ ಸೋಂಕುನಿವಾರಕವನ್ನು ತನ್ನೊಂದಿಗೆ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 4 ಬದಿಯಿಂದಲೂ ಸಿಂಪಡಣೆಗಳನ್ನು ಮಾಡುತ್ತದೆ. ಸುಮಾರು 3.5 ಲೀಟರ್ ಪೆಟ್ರೋಲ್ ಮೂಲಕ ಇದು ಸುಮಾರು ಒಂದೂವರೆ ಗಂಟೆ ಹಾರಾಟ ನಡೆಸಬಲ್ಲದು.
ಪ್ರಸ್ತುತ 5 ಡ್ರೋನ್ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಡ್ರೋನ್ಗಳನ್ನು ನಿಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.