ಟೊಕಿಯೋ: ಜಾಗತಿಕ ಮಟ್ಟದಲ್ಲಿ ಮಹಾ ಬಿಕ್ಕಟ್ಟನ್ನು ಸೃಷ್ಟಿ ಮಾಡಿರುವ ಕೊರೋನ ವೈರಸ್ ಕಾರಣದಿಂದಾಗಿ ಒಲಿಂಪಿಕ್ಸ್ ಕೂಡ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಇಂಟರ್ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಸದಸ್ಯ ಡಿಕ್ ಪೌಂಡ್ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.
ಈ ವರ್ಷದಲ್ಲಿ ನಡೆಯಬೇಕಾಗಿದ್ದ ಟೋಕಿಯಾ ಒಲಿಂಪಿಕ್ಸ್ ಅನ್ನು 2021ರವರೆಗೆ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜುಲೈ 24 ರಂದು ಒಲಿಂಪಿಕ್ಸ್ ಆರಂಭವಾಗಬೇಕಿತ್ತು, ಆದರೆ ಕೊರೋನವೈರಸ್ ಕಾರಣದಿಂದಾಗಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕ್ರೀಡಾಕೂಟವನ್ನು ಮುಂದಿರುವ ನಿರ್ಧಾರವನ್ನು ತೆಗೆದುಕೊಂಡಿದೆ.
ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ತಾವು ತಮ್ಮ ಕ್ರೀಡಾಪಟುಗಳನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕಳುಹಿಸಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದವು.
ಒಲಿಂಪಿಕ್ಸ್ ಅನ್ನು ಮುಂದೂಡುವುದು ನಮ್ಮ ಮುಂದೆ ಇರುವ ಏಕೈಕ ಆಯ್ಕೆಯಾಗಿದೆ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹೇಳಿದ್ದರು.
ಒಲಿಂಪಿಕ್ಸ್ ಮಾತ್ರವಲ್ಲದೆ ಜಗತ್ತಿನ ಅನೇಕ ಮಹತ್ವದ ಕ್ರೀಡಾಕೂಟಗಳು ಕೂಡ ರದ್ದುಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.