ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಕೊರೋನವೈರಸ್ ಪ್ರಕರಣಗಳು 500 ದಾಟಿದರೂ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಲು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದಾರೆ.
ಪಾಕಿಸ್ಥಾನದಲ್ಲಿ ಈವರೆಗೆ ಮೂರು COVID-19 ಸಾವುಗಳು ಸಂಭವಿಸಿವೆ ಮತ್ತು ಒಟ್ಟು ದೃಢ ಪಡಿಸಿದ ಪ್ರಕರಣಗಳ ಸಂಖ್ಯೆ 501 ಕ್ಕೆ ಏರಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸಿಂಧ್ 252 ಪ್ರಕರಣಗಳೊಂದಿಗೆ ಹೆಚ್ಚು ಹಾನಿಗೊಳಗಾದ ಪ್ರಾಂತ್ಯವಾಗಿದೆ.
ಸೋಂಕಿನ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ವಿಮಾನಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ಥಾನವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ತಜ್ಞರು ಸೂಚಿಸಿದ್ದಾರೆ.
“ಲಾಕ್ ಡೌನ್ ಎಂದರೆ ಕರ್ಫ್ಯೂ ತರಹದ ಪರಿಸ್ಥಿತಿ, ಇದು ದೇಶದಲ್ಲಿ ಅಶಾಂತಿಯನ್ನು ಉಂಟುಮಾಡುತ್ತದೆ ಮತ್ತು ನಾವು ಅದನ್ನು ಭರಿಸಲಾರೆವು. ಇದು ಬಡ ಜನರನ್ನು ಹೆಚ್ಚು ದುರ್ಬಲಗೊಳಿಸುತ್ತದೆ” ಎಂದು ಖಾನ್ ಹೇಳಿದ್ದಾರೆ.
“ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸುತ್ತಿರುವ ವಿಶ್ವದ ಇತರ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. “ಆದರೂ, ನಾವು ನಮ್ಮ ಕೆಳ ಮತ್ತು ಕಾರ್ಮಿಕ ವರ್ಗವನ್ನು ಕೊರೋನವೈರಸ್ ಪರಿಣಾಮಗಳಿಂದ ರಕ್ಷಿಸುತ್ತೇವೆ. ಮಂಗಳವಾರ ಪ್ಯಾಕೇಜ್ ಘೋಷಿಸಿದ್ದೇವೆ” ಎಂದಿದ್ದಾರೆ.
ಈ ದೇಶದಲ್ಲಿ ಕೊರೋನವೈರಸ್ ತಡೆಗಟ್ಟಲು ಅಗತ್ಯವಾದ ವೈದ್ಯಕೀಯ ಸಲಕರಣೆಗಳಾದ ಮುಖಗವಸುಗಳು, ಪರೀಕ್ಷಾ ಕಿಟ್ಗಳು ಮತ್ತು ವೆಂಟಿಲೇಟರ್ಗಳ ಕೊರತೆಯು ಪಾಕಿಸ್ತಾನದಲ್ಲಿ ಇದೆ. ಅಗತ್ಯ ಸಲಕರಣೆ ನೀಡದೇ ಇದ್ದರೆ ಮುಷ್ಕರ ನಡೆಸುವುದಾಗಿ ಅಲ್ಲಿನ ವೈದ್ಯರು ಬೆರದಿಕೆ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.