ಕೊರೋನಾವೈರಸ್ ಮಹಾಮಾರಿ ಹುಟ್ಟಿದ್ದು ಚೀನಾದಲ್ಲಿ, ಪಸರಿಸಿರುವುದು ಕೂಡ ಚೀನಿಯರಿಂದಲೇ, ಆದರೂ ಇದನ್ನು ಚೀನಾ ಕಾಯಿಲೆ ಎಂದರೆ ಚೀನಿಯರು ಉರಿದು ಬೀಳುತ್ತಿದ್ದಾರೆ. ಇದು ಜನಾಂಗೀಯ ನಿಂದನೆ ಎನ್ನುತ್ತಿದ್ದಾರೆ. ಚೀನಾದ ವುಹಾನ್ನಿಂದ ಪ್ರಾರಂಭವಾದ ಕೊರೋನಾವೈರಸ್ನ ಮಾರಕ ಸಾಂಕ್ರಾಮಿಕದ ವಿರುದ್ಧ ಜಗತ್ತು ಈಗ ಹೋರಾಡುತ್ತಿದೆ. ಆದರೆ ಚೀನಾ ಮಾತ್ರ ಬಲಿಪಶು ತಾನೇ ಎಂಬಂತೆ ನಡೆದುಕೊಳ್ಳುತ್ತಿದೆ.
ಕೊರೋನಾವೈರಸ್ ಸೋಂಕು ಪ್ರಾರಂಭವಾಗಿದ್ದು ಮತ್ತು ಹರಡಿದ್ದು 2019ರ ನವೆಂಬರ್ 14 ರಿಂದ ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಆರಂಭದಿಂದಲೂ ಇದು ಮಾನವರಿಂದ ಮಾನವರಿಗೆ ಹರಡುವಿಕೆಯನ್ನು ಕಂಡಿದೆ. ಆದರೆ ಚೀನಾ ಮಾತ್ರ ಕೋವಿಡ್ -19 ಮಾನವ ಪ್ರಸರಣವನ್ನು ಕಂಡಿಲ್ಲ ಎಂದೇ ಆರಂಭದಲ್ಲಿ ವಾದಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವ ಡಬ್ಲ್ಯುಎಚ್ಒ ಮಾಡಿದ ಟ್ವೀಟ್ನಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಚೀನಾ ಹೇಗೆ ಜಗತ್ತನ್ನು ದಾರಿ ತಪ್ಪಿಸುತ್ತಿದೆ ಎಂಬುದು ತಿಳಿದು ಬರುತ್ತದೆ.
ಕೊರೋನವೈರಸ್ ಮಾನವ ಪ್ರಸರಣವನ್ನು ಕಂಡಿಲ್ಲ ಎಂಬ ಚೀನಾದ ಅಧಿಕಾರಿಗಳ ಹೇಳಿಕೆಯನ್ನು ಡಬ್ಲ್ಯುಎಚ್ಒ ಟ್ವೀಟ್ಗಳು ಅಲ್ಲಗೆಳೆಯುತ್ತವೆ. ಚೀನಾ, ಇಟಲಿ, ಇರಾನಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಾವು ಸಂಭವಿಸಬೇಕಾದರೆ ಅಥವಾ ವೈರಸ್ ಹರಡಬೇಕಾದರೆ ಮಾನವ ಪ್ರಸರಣ ಇರಲೇ ಬೇಕು.
ಕೊರೋನವೈರಸ್ ಝೂನೊಟಿಕ್ ವೈರಸ್ಗಳ ಒಂದು ಭಾಗವಾಗಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಜನರ ನಡುವೆ ಹರಡುತ್ತದೆ. ಕೊರೋನವೈರಸ್ ಸಾಂಕ್ರಾಮಿಕ, ಮಾರಕ ಉಸಿರಾಟದ ಕಾಯಿಲೆಯಾಗಿದ್ದು, ಇದು ಚೀನಾದ ವುಹಾನ್ನಲ್ಲಿ ಮೊದಲು ವರದಿಯಾಗಿತ್ತು. ಸೋಂಕಿಗೆ ಒಳಗಾದ ಯಾರಾದರೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ವೈರಸ್ ಹರಡುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಕೆಮ್ಮುವುದು, ಸೀನುವುದು ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಕೈಕುಲುಕುವುದು ಸಹ ಹರಡುವಿಕೆಗೆ ಕಾರಣವಾಗಬಹುದು.
ದಕ್ಷಿಣ ಕೊರಿಯಾದ ಚರ್ಚ್ ಒಂದರಲ್ಲಿ ಉಪ್ಪಿನ ನೀರನ್ನು ಸಿಂಪಡಿಸಿದ ಕಾರಣದಿಂದಾಗಿ 160 ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ ಎಂದು ನಂಬಲಾಗಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೂಲಕ ಹೆಚ್ಚಿನ ಸಂಖ್ಯೆಯ ಚೀನೀ ಪ್ರಯಾಣಿಕರನ್ನು ಪಡೆದ ಇಟಲಿ, ಹೆಚ್ಚು ಕೊರೋನ ಪ್ರಭಾವಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ರೋಗ ಮತ್ತು ಅದರ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ ವೈದ್ಯರು ಮತ್ತು ಸಂಶೋಧಕರನ್ನು ಮೌನಗೊಳಿಸಲು ಚೀನಾದ ಅಧಿಕಾರಿಗಳು ಹೇಗೆ ಸಕ್ರಿಯವಾಗಿ ಪ್ರಯತ್ನಿಸಿದರು ಎಂಬ ಬಗ್ಗೆ ವರದಿಗಳು ಈಗ ಹೊರಬಿದ್ದಿವೆ. ವೈರಸ್ ಬಗ್ಗೆ ಮೊದಲು ಮಾಹಿತಿ ನೀಡಿದ್ದ ವೈದ್ಯನನ್ನೇ ಚೀನಾ ಹತ್ತಿಕ್ಕಲು ಪ್ರಯತ್ನಿಸಿತ್ತು. ಕೊನೆಗೆ ಆ ವೈದ್ಯನೂ ಕೊರೋನಾಗೆ ಬಲಿಯಾದರು.
ಪ್ರಯಾಣ ನಿರ್ಬಂಧ ಮತ್ತು ಲಾಕ್ಡೌನ್ ಅನ್ನೂ ಚೀನಾ ತುಂಬಾ ವಿಳಂಬವಾಗಿ ತಂದಿತ್ತು. ಸಾಂಕ್ರಾಮಿಕದಂತೆ ರೋಗ ಹರಡುತ್ತಿದೆ ಎಂಬ ಸುದ್ದಿಯನ್ನು ಹತ್ತಿಕ್ಕಲು ಚೀನಾ ದೊಡ್ಡ ಪ್ರಯತ್ನಗಳನ್ನು ಮಾಡಿತ್ತು. ವೈರಸ್ ಸ್ಯಾಂಪಲ್ಗಳ ಮಾಹಿತಿಯನ್ನು ಹೊರಗೆ ಬಿಡದಂತೆ ಲ್ಯಾಬೋರೇಟರಿಗಳಿಗೆ ಅದು ಕಟ್ಟಾಜ್ಞೆ ನೀಡಿತ್ತು. ತನ್ನ ಆರ್ಥಿಕತೆಯನ್ನು ಉಳಿಸುವುದು ಅದರ ಮೂಲ ಉದ್ದೇಶವಾಗಿತ್ತು.
ಚೀನಾದ ಈ ತಪ್ಪುಗಳಿಂದಲೇ ಜಗತ್ತು ಇಂದು ದೊಡ್ಡ ಬೆಲೆ ತೆರುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೈರಸ್ ಹುಟ್ಟಿಕೊಂಡ ಆರಂಭದಲ್ಲೇ ಅದು ಮಾಹಿತಿಯನ್ನು ಹಂಚಿಕೊಂಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಜಗತ್ತು ಆರೋಗ್ಯ ಬಿಕ್ಕಟ್ಟಿಗೆ ಒಳಗಾಗಬೇಕಾಗುತ್ತಿರಲಿಲ್ಲ. ಮಾಹಿತಿಯನ್ನು ಮುಚ್ಚಿಟ್ಟು ಅದು ವಿಶ್ವವನ್ನು ಮೃತ್ಯು ಕೂಪಕ್ಕೆ ದೂಡಿದೆ.
ಸೌತಾಂಪ್ಟನ್ ವಿಶ್ವವಿದ್ಯಾಲಯದ ಅಧ್ಯಯನವು, ಚೀನಾದ ಅಧಿಕಾರಿಗಳು ಕನಿಷ್ಠ 1 ವಾರ, 2 ವಾರಗಳು ಅಥವಾ 3 ವಾರಗಳ ಮುಂಚೆಯೇ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರೆ, ಜಾಗತಿಕವಾಗಿ ಹರಡಿರುವ ಕೊರೋನಾವೈರಸ್ ಅನ್ನು 66%, 86% ರಷ್ಟು ತಡೆಯಬಹುದಿತ್ತು ಎನ್ನುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.