ವಾಷಿಂಗ್ಟನ್: ಮಾರಣಾಂತಿಕ ಕೊರೋನಾವೈರಸ್ ಬಗ್ಗೆ ಪ್ರಾರಂಭದಲ್ಲಿ ಮಾಹಿತಿಯನ್ನು ಮರೆಮಾಚಿದ ಚೀನಾದಿಂದಾಗಿ ಜಗತ್ತು ದೊಡ್ಡ ಮಟ್ಟದ ಬೆಲೆ ತೆರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಎದುರಿಸುತ್ತಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್ ಕಾರಣ ಎಂದು ಅವರು ಆರೋಪಿಸಿದ್ದಾರೆ.
“ಈ ಸೋಂಕಿನ ಬಗ್ಗೆ ಹಲವು ತಿಂಗಳುಗಳ ಹಿಂದೆಯೇ ನಮಗೆ ತಿಳಿಯುತ್ತಿದ್ದರೆ ಉತ್ತಮವಾಗುತ್ತಿತ್ತು. ಬಹುಶಃ ಈ ಸೋಂಕು ಚೀನಾಕ್ಕೆ ಮಾತ್ರ ಸೀಮಿತವಾಗಿ ಇರುತ್ತಿತ್ತು” ಎಂದು ಟ್ರಂಪ್ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೊಕರೋನವೈರಸ್ ಸಾಂಕ್ರಾಮಿಕ ರೋಗವು ಕನಿಷ್ಠ 145 ದೇಶಗಳಲ್ಲಿ 210,300 ಕ್ಕೂ ಹೆಚ್ಚು ಜನರನ್ನು ಅಪೀಡಿತಗೊಳಿಸಿದೆ ಮತ್ತು 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚೀನಾದ ಹೊರಗಿನವರು. ಈ ಸಾಂಕ್ರಾಮಿಕ ರೋಗವು ಮೊದಲು ವುಹಾನ್ ನಗರದಲ್ಲಿ ಪ್ರಾರಂಭವಾಯಿತು.
“ಚೀನಾ ಮಾಡಿದ ತಪ್ಪಿನಿಂದಾಗಿ ಜಗತ್ತು ದೊಡ್ಡ ಬೆಲೆ ತೆರುತ್ತುದೆ ಮತ್ತು ಅವರಿಂದ ಕೊರೋನವೈರಸ್ ಬಗ್ಗೆ ಮಾಹಿತಿ ಹೊರಬಾರದಿದ್ದ ಕಾರಣದಿಂದಾಗಿ ಇಷ್ಟೆಲ್ಲಾ ಅನಾಹುತ ಸಂಭವಿಸಿದೆ” ಎಂದು ಟ್ರಂಪ್ ಹೇಳಿದ್ದಾರೆ.
ತನ್ನ ದೇಶದಲ್ಲಿ ಕೊರೋನವೈರಸ್ ಕಾಣಿಸಿಕೊಂಡ ಸಂದರ್ಭದಲ್ಲೂ ಈ ವಿಷಯವನ್ನು ಹೊರಜಗತ್ತಿನಿಂದ ಮುಚ್ಚಿಡಲು ಚೀನಾ ಪ್ರಯತ್ನಿಸಿತ್ತು ಎಂಬ ಆರೋಪವಿದೆ. ತನ್ನ ಆರ್ಥಿಕತೆಯನ್ನು ರಕ್ಷಿಸುವ ಉದ್ದೇಶದಿಂದ ಅದು ಈ ರೀತಿ ನಡೆದುಕೊಂಡಿತ್ತು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.