ಅಹ್ಮದಾಬಾದ್: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನವೈರಸ್ ಹರಡುವ ಭೀತಿ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ವಿವಿಧ ರಾಜ್ಯ ಸರ್ಕಾರಗಳು ಕಂಪನಿಗಳಿಗೆ ಸಲಹೆಗಳನ್ನು ನೀಡಿವೆ. ಅನೇಕ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ಈಗಾಗಲೇ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆಗಳನ್ನೂ ನೀಡಿವೆ.
ಭಾರತದ ಡೈರಿ ಉತ್ಪನ್ನದಲ್ಲಿ ಪ್ರಸಿದ್ಧ ಬ್ರಾಂಡ್ ಆಗಿರುವ ಅಮೂಲ್ ಈ ಕೊರೋನಗೆ ಸಂಬಂಧಿಸಿದಂತೆ ಸಮಯೋಜಿತವಾದ, ಸಾಮಾಜಿಕವಾಗಿ ಪರಿಣಾಮ ಬೀರುವ ವ್ಯಂಗ್ಯ ಚಿತ್ರವನ್ನು ಬಿಟ್ಟು ತನ್ನ ಸಾಮಾಜಿಕ ಕಳಕಳಿಯನ್ನು ಮೆರೆದಿದೆ.
ಸೋಫಾದ ಮೇಲೆ ಕುಳಿತು ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಅಮೂಲ್ ಬಾಲಕಿಯ ಕಾರ್ಟೂನ್ ಅನ್ನು ಅಮೂಲ್ ಮಂಗಳವಾರ ಹಂಚಿಕೊಂಡಿದೆ. ಈ ಕಾರ್ಟೂನ್ ಮೂಲಕ ಬೆಳಗಿನ ಉಪಾಹಾರ ಮತ್ತು ಭೋಜನಕ್ಕಾಗಿ ಮನೆಯನ್ನೇ ಆರಿಸಿಕೊಳ್ಳಿ ಎನ್ನುವ ಸಂದೇಶವನ್ನು ಅಮೂಲ್ ಕೊಟ್ಟಿದೆ.
ಕಳೆದ ವಾರ ಅಮೂಲ್ ಇಬ್ಬರು ವ್ಯಕ್ತಿಗಳು ಪರಸ್ಪರ ನಮಸ್ತೆ ಮಾಡುವ ಕಾರ್ಟೂನ್ ಅನ್ನು ಬಿಟ್ಟಿತ್ತು. ಇದಕ್ಕೆ ಸಲಾಮುಲ್ ನಮಸ್ತೆ
“ಕೊರೋನವೈರಸ್ ಕಾರಣದಿಂದಾಗಿ ‘ಸಲಾಮೂಲ್ ನಮಸ್ತೆ’ ಇಂದು ಜಾಗತಿಕ ಮಟ್ಟದಲ್ಲಿ ಹೋಗಿದೆ. ಹಲವಾರು ದಶಕಗಳ ಹಿಂದೆ ಯೋಗವನ್ನು ಪಸರಿಸಿದ ನಂತರ ಭಾರತೀಯ ಸಾಂಪ್ರದಾಯಿಕ ಶುಭಾಶಯಗಳು ಮತ್ತೆ ಚಾಲ್ತಿಗೆ ಬಂದಿದೆ” ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿತ್ತು.
#Amul Topical: To control the Coronavirus stay indoors! pic.twitter.com/itWlewr09t
— Amul.coop (@Amul_Coop) March 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.