ಮಾರ್ಚ್ 2017ರಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದು ಹೆಚ್ಚು ಆದ್ಯತೆಯನ್ನು ನೀಡಿದ್ದು ವಿದ್ಯುದೀಕರಣಕ್ಕೆ, ಉತ್ತರಪ್ರದೇಶದಲ್ಲಿ ವಿದ್ಯುತ್ ಸರಬರಾಜಿನ ಸ್ಥಿತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಅದು ಹೆಚ್ಚಿನ ಒತ್ತನ್ನು ನೀಡುತ್ತಿದೆ.ಯೋಗಿ ಸರ್ಕಾರವು ‘ಸಬ್ಕೊ ಬಿಜ್ಲಿ, ಪರ್ಯಾಪ್ತ್ ಬಿಜ್ಲಿ ಮತ್ತು ನಿರ್ಬದ್ ಬಿಜ್ಲಿ’ (ಎಲ್ಲರಿಗೂ ವಿದ್ಯುತ್, ಸಾಕಷ್ಟು ವಿದ್ಯುತ್ ಮತ್ತು ಅಡೆತಡೆಯಿಲ್ಲದ ವಿದ್ಯುತ್) ಪ್ರತಿಜ್ಞೆಯನ್ನು ತೆಗೆದುಕೊಂಡು ಕಳೆದ ಮೂರು ವರ್ಷಗಳಲ್ಲಿ ಪಟ್ಟುಬಿಡದೆ ಕೆಲಸ ಮಾಡಿದೆ.
ಉತ್ತರಪ್ರದೇಶದ ಮಟ್ಟಿಗೆ ಇದು ಮಹತ್ವದ ಬದಲಾವಣೆಯಾಗಿದೆ. ಯಾಕೆಂದರೆ ಹಿಂದಿನ ಅಲ್ಲಿನ ಮುಖ್ಯಮಂತ್ರಿಗಳು ತಮಗೆ ರಾಜಕೀಯವಾಗಿ ಅನುಕೂಲಕರವಾದ ಕ್ಷೇತ್ರಗಳಿಗೆ ಮಾತ್ರ ಹೆಚ್ಚು ವಿದ್ಯುತ್ ನೀಡುತ್ತಿದ್ದರು, ತಮಗೆ ಅನಾನುಕೂಲಕರವಾದ ಕ್ಷೇತ್ರಗಳಿಗೆ ವಿದ್ಯುತ್ ಕಡಿತಗೊಳಿಸುತ್ತಿದ್ದರು. ಇಂತಹ ರಾಜ್ಯದಲ್ಲೀಗ ಸರ್ವರಿಗೂ ವಿದ್ಯುತ್ ಸಿಗುತ್ತಿವೆ.
‘ಸಬ್ಕೊ ಬಿಜ್ಲಿ’ (ಎಲ್ಲರಿಗೂ ವಿದ್ಯುತ್) ಅಭಿಯಾನದ ಮೂಲಕ ಮೂಲೆ ಮೂಲೆಯ ಜನರಿಗೂ ವಿದ್ಯುತ್ ಅನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶದ 1.2 ಲಕ್ಷಕ್ಕೂ ಹೆಚ್ಚು ಕುಗ್ರಾಮಗಳು ವಿದ್ಯುದ್ದೀಕರಿಸಲ್ಪಟ್ಟವು. ಸ್ವಾತಂತ್ರ್ಯದ ನಂತರ ಇಲ್ಲಿ ವಿದ್ಯುದ್ದೀಕರಣ ನಡೆದಿರಲಿಲ್ಲ.
ಪ್ರಧಾನಮಂತ್ರಿಯ ಸೌಭಾಗ್ಯ ಯೋಜನೆ ಮತ್ತು ಇತರ ಯೋಜನೆಗಳ ಅಡಿಯಲ್ಲಿ, ಈ ಹಿಂದೆ ಗ್ರಿಡ್ನಿಂದ ಹೊರಗಿದ್ದ 1.24 ಕೋಟಿ ಕುಟುಂಬಗಳಿಗೆ ಉತ್ತರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ನೀಡಲಾಯಿತು.
ಸೀಮೆಎಣ್ಣೆ ಲ್ಯಾಂಟರ್ನ್ನಲ್ಲಿ ಜೀವಿಸುತ್ತಿದ್ದ ಶೇಕಡಾ 75 ಕ್ಕೂ ಹೆಚ್ಚು ಕುಟುಂಬಗಳು ಇಂದು ಪ್ರಕಾಶಮಾನವಾದ ಎಲ್ಇಡಿ ಬೆಳಕನ್ನು ಆನಂದಿಸುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ಯೋಗಿ ಸರ್ಕಾರದ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಶೇಕಡಾ 56 ರಷ್ಟು ಹೆಚ್ಚಳ ಮತ್ತು ವಿದ್ಯುತ್ ಬೇಡಿಕೆಯಲ್ಲಿ ಶೇಕಡಾ 53 ರಷ್ಟು ಹೆಚ್ಚಳವಾಗಿದೆ. ಇದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ.
ಹೆಚ್ಚಿದ ಈ ವಿದ್ಯುತ್ ಬೇಡಿಕೆಯನ್ನು ಪೂರೈಸುವುದು ಮುಂದಿನ ಸವಾಲಾಗಿತ್ತು. ಇದನ್ನು ಪೂರೈಸಲು ರಾಜ್ಯವು ಸಾಕಷ್ಟು ವಿದ್ಯುತ್ ಉತ್ಪಾದಿಸಿ ಸಂಗ್ರಹಿಸಬೇಕಾಗಿತ್ತು. ಇದಕ್ಕಾಗಿ ಯೋಗಿ ಸರ್ಕಾರವು ‘ಪರ್ಯಾಪ್ತ್ ಬಿಜ್ಲಿ’ ಅಭಿಯಾನಕ್ಕೆ ಚಾಲನೆ ನೀಡಿತು.
ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶವು 5323 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸಿದೆ. ಥರ್ಮಲ್ನಲ್ಲಿ 1890 ಮೆಗಾವ್ಯಾಟ್, ಹೈಡ್ರೊದಲ್ಲಿ 138 ಮೆಗಾವ್ಯಾಟ್, ಸೌರದಲ್ಲಿ 1350 ಮೆಗಾವ್ಯಾಟ್ ಮತ್ತು ಸೌರೇತರದಲ್ಲಿ 1945 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದೆ.
ಹೆಚ್ಚಿದ ಬೇಡಿಕೆಯನ್ನು ಪೂರೈಸಲು, ರಾಜ್ಯವು ತನ್ನ ಪ್ರಸರಣ ಸಾಮರ್ಥ್ಯವನ್ನು 16,346 ಮೆಗಾವ್ಯಾಟ್ನಿಂದ 24,000 ಮೆಗಾವ್ಯಾಟ್ಗೆ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಉಜಾಲಾ ಅಡಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು 2.6 ಕೋಟಿಗೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ವಿತರಿಸುವ ಮೂಲಕ ವಿದ್ಯುತ್ ಬೇಡಿಕೆಯನ್ನು 700 ಮೆಗಾವ್ಯಾಟ್ ಕಡಿತಗೊಳಿಸಿದೆ ಮತ್ತು ಇದರಿಂದ 1,335 ಕೋಟಿ ರೂ ಉಳಿಸಿದೆ.
ಹೆಚ್ಚಿದ ಸಾಮರ್ಥ್ಯದಿಂದಾಗಿ, ಉತ್ತರಪ್ರದೇಶ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಕಚೇರಿಯಲ್ಲಿ 24 ಗಂಟೆಗಳ ವಿದ್ಯುತ್, ತಹಸಿಲ್ ಕಛೇರಿಯಲ್ಲಿ 20 ಗಂಟೆ ಮತ್ತು ಹಳ್ಳಿಗಳಲ್ಲಿ 18 ಗಂಟೆಗಳ ವಿದ್ಯುತ್ ಒದಗಿಸಲು ರಾಜ್ಯಕ್ಕೆ ಸಾಧ್ಯವಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ಒಂದು ದೊಡ್ಡ ಸಮಸ್ಯೆಯಾಗಿತ್ತು ಮತ್ತು ಯೋಗಿ ಆದಿತ್ಯನಾಥ ಸರ್ಕಾರವು ಅದನ್ನು ಸಮರ್ಥವಾಗಿ ನಿಭಾಯಿಸಿತು.
ವಿದ್ಯುತ್ ಕಳ್ಳತನವನ್ನು ಪರಿಶೀಲಿಸಲು, ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಮೀಸಲು ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ, ಅದರಲ್ಲಿ 62 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ಅಡೆತಡೆಯಿಲ್ಲದ ವಿದ್ಯುತ್ ಸರಬರಾಜು ಗುರಿಯನ್ನು ಸಾಧಿಸಲು (‘ನಿರ್ಬದ್ ಬಿಜ್ಲಿ’), ಯುಪಿ ಸರ್ಕಾರ ರಾಜ್ಯದ ವಿದ್ಯುತ್ ಮೂಲಸೌಕರ್ಯವನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸಿದೆ.
ಕಳೆದ ಮೂರು ವರ್ಷಗಳಲ್ಲಿ 7787 ಸರ್ಕ್ಯೂಟ್ ಕಿಮೀ, 33 ಕೆವಿ ಮಾರ್ಗಗಳನ್ನು ನಿರ್ಮಿಸಲಾಗಿದೆ ಮತ್ತು 33/11 ಕೆವಿಯ 587 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ.
1.47 ಲಕ್ಷ ಹೊಸ ವಿತರಣಾ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗಿದ್ದು, 6000 ಕ್ಕೂ ಹೆಚ್ಚನ್ನು ನವೀಕರಿಸಲಾಗಿದೆ. ಯಾವುದೇ ಅಸಮರ್ಪಕ ಟ್ರಾನ್ಸ್ಫಾರ್ಮರ್ ಅನ್ನು ನಗರ ಪ್ರದೇಶಗಳಲ್ಲಿ 24 ಗಂಟೆಗಳ ಒಳಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 48 ಗಂಟೆಗಳ ಒಳಗೆ ಸರಿಪಡಿಸಲು ಸರ್ಕಾರ ಈಗ ಹೊಸ ಸೇವಾ ಮಟ್ಟದ ಒಪ್ಪಂದವನ್ನು (ಎಸ್ಎಲ್ಎ) ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.