ತಿರುವನಂತಪುರಂ: ಇಸ್ಲಾಂಗೆ ಮತಾಂತರಗೊಂಡು ಇಸಿಸ್ ಉಗ್ರ ಸಂಘಟನೆಯನ್ನು ಸೇರಿರುವ ಕೇರಳದ ಯುವತಿಯೊಬ್ಬಳು ಅಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾಳೆ. ಪಾಕಿಸ್ಥಾನದ ಮಹಿಳೆಯೊಬ್ಬಳು ಅಫ್ಘಾನಿಸ್ಥಾನದಲ್ಲಿನ ಇಸಿಸ್ ಶಿಬಿರಕ್ಕೆ ಆಗಾಗ ಬಂದು ಹೋಗುತ್ತಿದ್ದಳು ಮತ್ತು ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸುತ್ತಿದ್ದಳು ಎಂದಿದ್ದಾಳೆ.
ಅಫ್ಘಾನಿಸ್ಥಾನದಲ್ಲಿ ಇಸಿಸ್ ಭಯೋತ್ಪಾದಕ ಗುಂಪನ್ನು ಬಲಪಡಿಸುವ ಹಿಂದೆ ಪಾಕಿಸ್ಥಾನವಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಈಗಾಗಲೇ ಶಂಕೆಯನ್ನು ವ್ಯಕ್ತಪಡಿಸಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯು ನೀಡಿದ ಮಾಹಿತಿ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
2016 ರಲ್ಲಿ ಕೇರಳದಿಂದ 21 ಜನರು ವಿವಿಧ ಮಾರ್ಗಗಳ ಮೂಲಕ ಅಫ್ಘಾನಿಸ್ಥಾನದ ನಂಗರ್ಹಾರ್ ತಲುಪಿ ಇಸಿಸ್ ಸೇರ್ಪಡೆಗೊಂಡಿದ್ದರು. ಆದರೆ ಅಫ್ಘಾನಿಸ್ಥಾನ ಭದ್ರತಾ ಪಡೆಗಳ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನೂರಾರು ಭಯೋತ್ಪಾದಕರನ್ನು ಬಂಧಿಸಿವೆ.
ಕಳೆದ ವರ್ಷ, 2019 ರ ನವೆಂಬರ್ 15 ರಂದು ಬಂಧನಕ್ಕೊಳಗಾದವರಲ್ಲಿ ಕೇರಳದ ನಿಮಿಷಾ ಅಲಿಯಾಸ್ ಫಾತಿಮಾ ಕೂಡ ಒಬ್ಬಳು.
ತನ್ನ 3 ವರ್ಷದ ಮಗಳ ಜೊತೆ ಕಾಬೂಲ್ ಜೈಲಿನಲ್ಲಿರುವ ನಿಮಿಷಾ ಭದ್ರತಾ ಸಂಸ್ಥೆಗಳಿಗೆ ಹಲವು ಮಾಹಿತಿಗಳನ್ನು ತಿಳಿಸಿದ್ದು, ಪಾಕಿಸ್ಥಾನದ ಮಹಿಳೆಯೊಬ್ಬಳು ನಂಗರ್ಹಾರ್ನ ಶಿಬಿರಕ್ಕೆ ಬರುತ್ತಿದ್ದಳು ಮತ್ತು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಳು ಮತ್ತು ಇತರ ಭಯೋತ್ಪಾದಕರನ್ನು ಭೇಟಿಯಾಗುತ್ತಿದ್ದಳು ಎಂದಿದ್ದಾಳೆ.
ನಿಮಿಷಾ ತಿರುವನಂತಪುರದವಳಾಗಿದ್ದು, ಮೂರು ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡು ಅಫ್ಘಾನಿಸ್ಥಾನದಲ್ಲಿ ಪತಿಯೊಂದಿಗೆ ಇಸಿಸ್ ಭಯೋತ್ಪಾದನಾ ಸಂಘಟನೆಗೆ ಸೇರಿದ್ದಳು. ಅಫ್ಘಾನಿಸ್ಥಾನಕ್ಕೆ ಹೋಗಲು ನಿರ್ಧರಿಸಿದಾಗ ಅವಳು 7 ತಿಂಗಳ ಗರ್ಭಿಣಿಯಾಗಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.