ಬೆಂಗಳೂರು: ಎರಡು ಹೊಸ ಕೊರೋನವೈರಸ್ ಪ್ರಕರಣಗಳನ್ನು ಕರ್ನಾಟಕ ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿದೆ.
ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಂಗಳವಾರ ಬೆಳಿಗ್ಗೆ ಟ್ವೀಟ್ನಲ್ಲಿ ಇದನ್ನು ದೃಢಪಡಿಸಿದ್ದಾರೆ.
“ಕರ್ನಾಟಕದಲ್ಲಿ ನಮಗೆ ಇನ್ನೂ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಯುಕೆಯಿಂದ ಬಂದಿರುವ 20 ವರ್ಷದ ಯುವತಿಗೆ ಪರೀಕ್ಷೆ ಪಾಸಿಟಿವ್ ಎಂದು ಬಂದಿದೆ ಮತ್ತು ಕಲ್ಬುರ್ಗಿ ಮೃತ ರೋಗಿಯ ಸಂಪರ್ಕದಲ್ಲಿದ್ದ ಮತ್ತೊಬ್ಬರಿಗೆ ಪರೀಕ್ಷೆ ಪಾಸಿಟಿವ್ ಎಂದು ಬಂದಿದೆ. ಇಬ್ಬರನ್ನು ಗೊತ್ತುಪಡಿಸಿದ ಪ್ರತ್ಯೇಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ” ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ನಾಲ್ಕು ಹೊಸ ಕೊರೋನವೈರಸ್ ಪ್ರಕರಣಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ದೃಢಪಡಿಸಿದ್ದು, ದೇಶದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆಯನ್ನು 114 ಕ್ಕೆ ಏರಿಕೆಯಾಗಿದೆ.
ಎಲ್ಲಾ ಮಾಲ್ಗಳು, ಚಿತ್ರಮಂದಿರಗಳು, ಕ್ರೀಡಾಂಗಣಗಳು, ಉದ್ಯಾನವನಗಳನ್ನು ಮುಚ್ಚಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ ಮತ್ತು ಪ್ರಮುಖ ಸಮಾವೇಶಗಳು, ದೇವಾಲಯದ ಉತ್ಸವಗಳು ಮತ್ತು ದೊಡ್ಡ ಸಾರ್ವಜನಿಕ ಸಭೆಯಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.