ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ನ ಮತ್ತೊಂದು ವಿಕೆಟ್ ಪತನವಾಗುವ ಎಲ್ಲಾ ಸೂಚನೆಗಳೂ ಇವೆ. ರಾಜಸ್ಥಾನದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸು ಕಾಂಗ್ರೆಸ್ ಮತ್ತೊಬ್ಬ ನಾಯಕನನ್ನು ಕಳೆದುಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಿದೆ. ಸಚಿನ್ ಪೈಲಟ್ ಪಕ್ಷ ತೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ರಾಜ್ಯದ ಮುಖ್ಯಮಂತ್ರಿಯಾಗಿ ಗೆಹ್ಲೋಟ್ ಅವರನ್ನು ನೇಮಿಸಿ ಸಿಂಧಿಯಾ ಅವರಂತೆಯೇ ಪೈಲಟ್ ಅವರನ್ನೂ ಕಡೆಗಣಿಸಿದ್ದು, ಇದರಿಂದ ಪಕ್ಷದ ವಿರುದ್ಧ ಪೈಲಟ್ ಅಸಮಾಧಾನ ಹೊಂದಿದ್ದರು. ಅಲ್ಲದೆ ರಾಜಸ್ಥಾನದ ಕೋಟಾದಲ್ಲಿ ಶಿಶು ಮರಣ ಸಂಭವಿಸಿದಾಗ ಗೆಹ್ಲೋಟ್ ಅವರ ಬೇಜವಾಬ್ದಾರಿ ಮತ್ತು ಅವರು ಅನುಸರಿಸಿದ ನೀತಿಗಳ ಬಗ್ಗೆಯೂ ಪೈಲೆಟ್ ಬಹಿರಂಗವಾಗಿ ಟೀಕೆ ಮಾಡಿದ್ದರು. ಆ ನಂತರದಲ್ಲಿ ಈ ಇಬ್ಬರೂ ನಾಯಕರ ನಡುವೆ ಕಚ್ಚಾಟ ಹೆಚ್ಚಾಗಿತ್ತು. ಜಾಹೀರಾತುಗಳನ್ನು ನೀಡುವ ಸಂದರ್ಭಗಳಲ್ಲಿಯೂ ಪಕ್ಷ ಪೈಲಟ್ ಅವರನ್ನು ಕಡೆಗಣಿಸಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆಯೂ ಅವರು ಕೈ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದರು.
ಇನ್ನು ಸಿಂಧಿಯಾ ಕಾಂಗ್ರೆಸ್ ತೊರೆದಾಗ ಗೆಹ್ಲೋಟ್ ಅವರನ್ನು ಅವಕಾಶವಾದಿ ರಾಜಕಾರಣಿ ಎಂದು ಮೂದಲಿಸಿದ್ದರು. ಸದ್ಯ ತಮ್ಮದೇ ರಾಜ್ಯದ ಯುವ ನಾಯಕ ಕೈ ಕೊಡಲು ಮನಸ್ಸು ಮಾಡಿದ್ದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ ಎನ್ನಬಹುದು.
ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ ಎಲ್ಲಾ ಕಾಂಗ್ರೆಸ್ ನಾಯಕರೂ ಸಿಂಧಿಯಾ ಅವರನ್ನು ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ಮಾಡಿದ್ದು, ಪೈಲಟ್ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದಾಗಿ ಕಾದು ನೋಡಬೇಕಾಗಿದೆ.
ಸಿಂಧಿಯಾ, ಪೈಲಟ್, ಬಿಶ್ನಾಯ್ ಮತ್ತು ಡಿಯೋರಾ ಅವರಂತಹ ನಾಯಕರು ಕಾಂಗ್ರೆಸ್ಸಿನ ಒಂದು ಕುಟುಂಬದಂತೆ ಇದ್ದರು. ಆದರೆ ಈಗ ಅಲ್ಲಿ ವಿಷಕಾರಿ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ ಅಥವಾ ಯೋಗ್ಯರಿಗೆ ಅಲ್ಲಿ ಮನ್ನಣೆ ಸಿಗುವುದಿಲ್ಲ ಎಂಬುದನ್ನು ಅವರು ಅರಿತುಕೊಳ್ಳಲು ಆರಂಭಿಸಿದ್ದಾರೆ. ಕ್ಷೀಣಿಸುತ್ತಿರುವ ಜನಪ್ರಿಯತೆ ಮತ್ತು ನಾಯಕತ್ವದ ಕೊರೆತೆಯೊಂದಿಗೆ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾರಣವಾದದ್ದು ಬಿಜೆಪಿಯಲ್ಲ, ಬದಲಿಗೆ ಕಾಂಗ್ರೆಸ್ ಸ್ವಯಂ-ವಿನಾಶದ ಹಾದಿಯಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.