ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ. 370ನೇ ವಿಧಿ ರದ್ಧತಿಯ ಬಳಿಕ ಕಳೆದ ಏಳು ತಿಂಗಳಿನಿಂದ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಥವಾ ಪಿಎಸ್ಎ ಅಡಿಯಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ವಿಚಾರಣೆಯಿಲ್ಲದೆ ಬಂಧನಕ್ಕೆ ಅವಕಾಶ ನೀಡುವ ಕಠಿಣ ಕಾನೂನು ಇದಾಗಿದೆ.
83 ರ ಹರೆಯದ ಫಾರೂಕ್ ಅಬ್ದುಲ್ಲಾ ಅವರನ್ನು ಆಗಸ್ಟ್ 5 ರಂದು ಅವರ ಪುತ್ರ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ನಾಯಕರೊಂದಿಗೆ ಬಂಧನದಲ್ಲಿಡಲಾಗಿತ್ತು. ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಯಾಗದೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವ ಸಲುವಾಗಿ ಇವರುಗಳನ್ನು ಬಂಧನದಲ್ಲಿ ಇಡಲಾಗಿದೆ.
ಸೆಪ್ಟೆಂಬರ್ನಲ್ಲಿ, ರಾಜ್ಯಸಭಾ ಸದಸ್ಯರಾದ ಫಾರೂಕ್ ಅಬ್ದುಲ್ಲಾ ಅವರನ್ನು ಪಿಎಸ್ಎ ಅಡಿಯಲ್ಲಿ ಆರೋಪಿಯನ್ನಾಗಿಸಿ ಬಂಧನದಲ್ಲಿ ಇಡಲಾಗಿತ್ತು. ಈ ಕಾನೂನು ಎರಡು ವರ್ಷಗಳವರೆಗೆ ವಿಚಾರಣೆಯಿಲ್ಲದೆ ಬಂಧನವನ್ನು ಅನುವು ಮಾಡಿಕೊಡುತ್ತದೆ. ಈ ಕಾನೂನಿನಡಿಯಲ್ಲಿ ಫಾರೂಖ್ ವಿರುದ್ಧ “ಸಾರ್ವಜನಿಕ ಆದೇಶವನ್ನು ಭಂಗಗೊಳಿಸುವ” ಆರೋಪವನ್ನು ಹೊರಿಸಲಾಗಿದೆ.
ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಅಥವಾ ಕಲ್ಲು ಎಸೆಯುವವರ ವಿರುದ್ಧ ಬಳಸುವ ಪಿಎಸ್ಎ ಅನ್ನು ಕೇಂದ್ರ ಸರ್ಕಾರವು ಶಾಂತಿ ಕಾಪಾಡುವ ಸಲುವಾಗಿ ಮುಖ್ಯವಾಹಿನಿಯ ರಾಜಕಾರಣಿಯೊಬ್ಬರ ಮೇಲೆ, ವಿಶೇಷವಾಗಿ ಸಂಸದ ಮತ್ತು ಮೂರು ಬಾರಿ ಮುಖ್ಯಮಂತ್ರಿಯ ಮೇಲೆ ಮೊದಲ ಬಾರಿಗೆ ಬಳಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.