ನವದೆಹಲಿ: ಇಂದು ಲೋಕಸಭೆಯಲ್ಲಿ ಮಾತನಾಡಿದ ಬಿಜೆಪಿಯ ದೆಹಲಿ ಸಂಸದೆ ಮೀನಾಕ್ಷಿ ಲೇಖಿ ಅವರು ದೆಹಲಿ ದಂಗೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು.
“ದೆಹಲಿ ದಂಗೆಗೆ ಕಾಂಗ್ರೆಸ್ಸಿನವರು ಬಿಜೆಪಿಯ ಕಪಿಲ್ ಮಿಶ್ರಾ ಕಾರಣ ಎನ್ನುತ್ತಿದ್ದಾರೆ, ಹಾಗಾದರೆ ಶಾರ್ಜೀಲ್ ಇಮಾಮ್, ತಾಹೀರ್ ಹುಸೈನ್ ಮತ್ತು ಅಮಾನತುಲ್ಲಾ ಖಾನ್ ಮುಂತಾದವರ ಕೃತ್ಯಗಳಿಗೂ, ಮಹಿಳೆಯರನ್ನು ಛೇಡಿಸಿದವರ ಕೃತ್ಯಕ್ಕೂ ಅವರೇ ಕಾರಣರಾಗಿದ್ದಾರಾ?” ಎಂದು ಲೇಖಿ ಪ್ರಶ್ನಿಸಿದ್ದಾರೆ.
“ದಂಗೆಗೆ ಕಾರಣಕರ್ತರಾದವರು ಬೇರೆಯವರು ಎಂದು ತಿಳಿದಿದ್ದರೂ ಕೂಡ ಎಷ್ಟು ದಿನಗಳ ಕಾಲ ನೀವು ಕಪಿಲ್ ಮಿಶ್ರಾ ಮೇಲೆ ಆರೋಪ ಮಾಡುವುದನ್ನು ಮುಂದುವರೆಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
“ಕೆಲವು ಜೆಎನ್ಯು ವಿದ್ಯಾರ್ಥಿಗಳು ಮೊದಲು ಸಿಎಎಯನ್ನು ವಿರೋಧಿಸಿದರು, ನಂತರ ವಿಷಯ ಜಾಮಿಯಾಗೆ ಶಿಫ್ಟ್ ಆಯಿತು. ಅಲ್ಲಿ ಗಲಾಟೆಯಾದಾಗ ಪೊಲೀಸರು ಮಧ್ಯಪ್ರವೇಶಿಸಿದರೆ ಪೊಲೀಸರನ್ನೇ ಆರೋಪಿಗಳನ್ನಾಗಿ ಮಾಡಲಾಯಿತು, ವಾಕ್ ಸ್ವಾತಂತ್ರ್ಯದ ಹರಣ ಎನ್ನಲಾಯಿತು. ಸೋನಿಯಾ ಗಾಂಧಿ ಅವರು, ಇದು ಎಲ್ಲರ ಹೋರಾಟ ಬೀದಿಗಿಳಿಯಿರಿ ಎಂದರು, ಪ್ರಿಯಾಂಕ ಗಾಂಧೀ ಅವರು ರಸ್ತೆಗಿಳಿಯದವರು ಹೇಡಿಗಳು ಎಂಬ ಹೇಳಿಕೆ ನೀಡಿದರು” ಎಂದಿದ್ದಾರೆ.
ಟ್ರಂಪ್ ಬಂದಾಗ ರಸ್ತೆಗಿಳಿಯುತ್ತೇವೆ ಎಂದಿದ್ದ ಶಹೀನ್ ಭಾಗ್ ಪ್ರತಿಭಟನಾಕಾರರು ಮತ್ತು ಉಮರ್ ಖಲೀದ್ ವಿರುದ್ಧವೂ ಅವರು ಹರಿಹಾಯ್ದರು.
ಶೇ.15ರಷ್ಟಿರುವ ಮುಸ್ಲಿಮರು ಶೇ.85ರಷ್ಟಿರುವ ಮುಸ್ಲಿಮರನ್ನು ಸದೆ ಬಡಿಯಬಲ್ಲರು ಎಂದು ವಾರಿಸ್ ಪಠಾನ್ ನೀಡಿದ ಹೇಳಿಕೆಗೂ ಕಪಿಲ್ ಮಿಶ್ರಾ ಅವರೇ ಕಾರಣರಾ? ಎಂದು ಕಾಂಗ್ರೆಸ್ ಪಕ್ಷವನ್ನು ಲೇಖಿ ಪ್ರಶ್ನಿಸಿದ್ದಾರೆ.
‘Political lieology’ is the art of using lies as a weapon in politics and that is precisely what the opposition is doing today.
Watch Smt @M_Lekhi‘s full speech during the discussion on recent law & order situation in some parts of Delhi in Lok Sabha. https://t.co/LxC5wb2TRN
— BJP (@BJP4India) March 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.