ಬೆಂಗಳೂರು: ಈಗಾಗಲೇ ಕೊರೋನವೈರಸ್ ಭೀತಿಯಿಂದ ಆತಂಕಕ್ಕೆ ಒಳಗಾಗಿರುವ ಬೆಂಗಳೂರಿಗೆ ಇದೀಗ ಕಾಲರಾ ರೋಗದ ಭೀತಿ ಕೂಡ ಎದುರಾಗಿದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ, ಬೀದಿ ಬದಿಯಲ್ಲಿ ಕತ್ತರಿಸಿದ ಹಣ್ಣುಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.
ಬಿಬಿಎಂಪಿ ಕಮಿಷನರ್ ಬಿಎಚ್ ಅನಿಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಕಾಲರಾದ ರೋಗಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ನೈರ್ಮಲ್ಯವನ್ನು ಸುಧಾರಿಸುವ ಸಲುವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಆಹಾರ ವ್ಯಾಪಾರಿಗಳಿಗೆ ಶುಚಿತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ” ಎಂದಿದ್ದಾರೆ.
ಕಾಲರ ಮತ್ತು ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗೃತೆಯಿಂದ, ಪಾಲಿಕೆಯು ರಸ್ತೆ ಬದಿ ಆಹಾರ ಪದಾರ್ಥ ಮಾರಾಟ ಮಾಡುವುದನ್ನು, ನಿರ್ಬಂಧಿಸಿ ತೆರವುಗೊಳಿಸುತ್ತಿದೆ.
ನೈರ್ಮಲ್ಯದ ಕೊರತೆ ಇರುವುದರಿಂದ ಸಾರ್ವಜನಿಕರು ರಸ್ತೆ ಬದಿ ಮಾರಲ್ಪಡುವ ಆಹಾರಗಳನ್ನು ಸೇವಿಸದಂತೆ ಮನವಿ ಮಾಡುತ್ತೇನೆ.#BBMP #Bengaluru pic.twitter.com/9Dh9tNtnrQ
— B.H.Anil Kumar,IAS (@BBMPCOMM) March 10, 2020
ಕಲುಷಿತ ನೀರು ಬಳಕೆ ಮತ್ತು ಅನೈರ್ಮಲ್ಯತೆಯಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವುದನ್ನು ತಡೆಗಟ್ಟಲು, ಫುಟ್ ಪಾತ್ ಗಳಲ್ಲಿ ಆಹಾರ ಪದಾರ್ಥಗಳನ್ನು ಮಾರುವ ಕ್ಯಾಂಟೀನ್ ಮತ್ತು ಅಂಗಡಿಗಳನ್ನು ಬಿಬಿಎಂಪಿಯು ತೆರವುಗೊಳಿಸಿದೆ. ಈ ಕಾರ್ಯಾಚರಣೆ ನಾಳೆಯೂ ಮುಂದುವರೆಯಲಿದೆ. #BBMP #Bengaluru pic.twitter.com/7OTBl3cWnW
— B.H.Anil Kumar,IAS (@BBMPCOMM) March 10, 2020
In Bomanahalli Zone, #BBMP has shut unauthorized Chicken & Meat Shops.
ಸಾಂಕ್ರಾಮಿಕ ಕಾಯಿಲೆಗಳು ಬಾರದಂತೆ, ಮುಂಜಾಗೃತಾ ಕ್ರಮವಾಗಿ ಪಾಲಿಕೆಯ ಅಧಿಕಾರಿಗಳ ತಂಡ ಅನಧಿಕೃತವಾಗಿ ಅನೈರ್ಮಲ್ಯ ಪರಿಸರದಲ್ಲಿ ನಡೆಯುತ್ತಿದ್ದ ಕೋಳಿ ಮತ್ತು ಮಾಂಸ ಮಾರಾಟ ಕೇಂದ್ರಗಳನ್ನು ನಿನ್ನೆ ಮುಚ್ಚಿಸಿದೆ.#Bengaluru pic.twitter.com/0JVggnlA54— B.H.Anil Kumar,IAS (@BBMPCOMM) March 11, 2020
ಬಿಬಿಎಂಪಿ ತೆಗೆದುಕೊಂಡ ಹಲವಾರು ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿರುವ ಬಿಬಿಎಂಪಿ ನೋಡಲ್ ಅಧಿಕಾರಿ ವೆಂಕಟೇಶ್ ಅವರು ಅವರು, “ಎಲ್ಲಾ ಎಂಟು ವಲಯಗಳಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ನಾವು ಶುಚಿತ್ವವನ್ನು ಕಾಪಾಡುವಂತೆ ಅಭಿಯಾನವನ್ನು ಆರಂಭಿಸಿದ್ದೇವೆ. ಕತ್ತರಿಸಿದ ಹಣ್ಣುಗಳನ್ನು ಮತ್ತು ನೈರ್ಮಲ್ಯವಿರದ ಆಹಾರ ಪದಾರ್ಥಗಳನ್ನು ಬಳಕೆ ಮಾಡದಂತೆ ಮತ್ತು ಮಾರಾಟ ಮಾಡದಂತೆ ಈಗಾಗಲೇ ಹಿರಿಯ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬಗ್ಗೆ ನಾವು ಎಲ್ಲಾ ರೆಸ್ಟೋರೆಂಟ್ಗಳಿಗೂ ಸೂಚನೆಯನ್ನು ನೀಡಿದ್ದು, ಕುದಿಸಿದ ನೀರನ್ನೇ ಬಳಸುವಂತೆ ತಿಳಿಸಿದ್ದೇವೆ” ಎಂದಿದ್ದಾರೆ.
ಕಾಲರಾ ರೋಗವು ಕಲುಷಿತ ನೀರಿನಿಂದ ಬರುವ ಕಾಯಿಲೆ. ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸೇರಿ, ಆ ನೀರನ್ನು ಜನರು ಕುಡಿದರೆ ಅದರಿಂದ ಕಾಲರಾ ಬರುವ ಸಾಧ್ಯತೆ ಇದೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 17 ಜನರಿಗೆ ಕಾಲರಾ ಇರುವುದನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆಯ ವ್ಯಾಪ್ತಿಯ ಬೀದಿ ಬದಿಗಳಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟ ನಿಷೇಧಿಸಲು ಸೂಚನೆಯನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.