ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂಗಸಂಸ್ಥೆಯಾದ ಸೇವಾ ಭಾರತಿಯು ಕೊರೋನವೈರಸ್ ಸೋಂಕು ಪತ್ತೆಯಾದ ಗ್ರಾಮಗಳಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದೆ.
ಕೊರೋನ ಸೋಂಕು ದೃಢಪಟ್ಟ ಕೇರಳದ ರನ್ನಿ ಎಂಬ ಗ್ರಾಮದಲ್ಲಿ ಸೇವಾ ಭಾರತೀಯ ಕಾರ್ಯಕರ್ತರು ಮುಖಗವಸುಗಳನ್ನು ಉಚಿತವಾಗಿ ಹಂಚಿಕೆ ಮಾಡಿದ್ದಾರೆ.
ರನ್ನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮುಖಗವಸುಗಳ ಕೊರತೆಯನ್ನು ಎದುರಿಸುತ್ತಿತ್ತು ಇದನ್ನು ಮನಗಂಡ ಸೇವಾಭಾರತಿಯ ಸ್ವಯಂಸೇವಕರು ಮುಖಗವಸುಗಳನ್ನು ಹತ್ತಿರದ ಜಿಲ್ಲೆಗಳಿಂದ ತಂದು ಜನರಿಗೆ ಹಂಚಿದರು. ಈ ರನ್ನಿ ಗ್ರಾಮದಲ್ಲಿ ಆದಿತ್ಯವಾರದಂದು 5 ಕೊರೋನವೈರಸ್ ಪ್ರಕರಣಗಳು ಪತ್ತೆಯಾಗಿದೆ.
ಇಟಲಿಯಿಂದ ಮಾರಣಾಂತಿಕ ವೈರಸ್ ಸೋಂಕಿತ ದಂಪತಿಗಳು ಈ ಗ್ರಾಮಕ್ಕೆ ಬಂದ ನಂತರ ರನ್ನಿಯಲ್ಲಿ ಒಟ್ಟು ಐದು ಕೊರೋನ ಪೊಸಿಟೀವ್ ಪ್ರಕರಣಗಳು ದೃಢಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.