ನಕ್ಸಲರು ಮತ್ತು ಇಸ್ಲಾಮಿಕ್ ಭಯೋತ್ಪಾದಕರಿಗೆ ‘ತೀವ್ರಗಾಮಿಗಳು’
ದಂಗೆ ಎಬ್ಬಿಸುವ ಮುಸ್ಲಿಂ ಮತ್ತು ಕಮ್ಯೂನಿಸ್ಟ್ಗಳಿಗೆ ‘ಪ್ರತಿಭಟನಾಕಾರರು’
ಇದು ನಮ್ಮ ಭಾರತೀಯ ಪತ್ರಕರ್ತರು ಹೆಚ್ಚು ಬಳಸುವ ಕೆಲವು ಪದಗಳು. ಈ ಪದ ಬಳಕೆಗೆ ಇನ್ನೂ ಒಗ್ಗಿಕೊಳ್ಳದ ಪತ್ರಕರ್ತರನ್ನು ಇವರಗಳು ಭಕ್ತರು ಅಥವಾ ಕೇಸರಿ ಏಜೆಂಟರು ಎಂದು ಬಿಂಬಿಸಲು ಆರಂಭಿಸಿದ್ದಾರೆ. ಭಾರತೀಯರನ್ನು ಒಡೆದು ಹಿಂದೂಗಳ ವಿರುದ್ಧ ಎತ್ತಿ ಕಟ್ಟಲು ಎಡಪಂಥೀಯರು ಅವಿರತ ಪ್ರಯತ್ನವನ್ನು ನಡೆಸುತ್ತಲೇ ಇದ್ದಾರೆ.
ಎಡಪಂಥೀಯ ಮತ್ತು ಕೆಲ ಮುಸ್ಲಿಂ ಪತ್ರಕರ್ತರು ಮುಸ್ಲಿಮರನ್ನು ಪ್ರಚೋದಿಸಲು ದೊಡ್ಡ ಮಟ್ಟದಲ್ಲೇ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿಯ ಸಂದರ್ಭದಲ್ಲಿ ದಂಗೆ ಎಬ್ಬಲು ಪ್ರಚೋದನೆಯನ್ನು ನೀಡಲು ಇವರು ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಹಿಂಸಾಚಾರ, ಗಲಭೆಗಳು ಮತ್ತು ಬೆಂಕಿ ಹಚ್ಚುವಿಕೆಯನ್ನು ಯಾರು ಮಾಡಿದ್ದಾರೆಂದು ನಿಜ ಹೇಳದ ಇವರು, ಸರ್ಕಾರದ ಪ್ರಾಮಾಣಿಕ ಮತ್ತು ಉತ್ತಮ ಕಾರ್ಯಗಳ ಬಗ್ಗೆ ಅಪಪ್ರಚಾರವನ್ನು ಮಾಡುತ್ತಾ ಬಂದಿದ್ದಾರೆ.
ಈ ಪತ್ರಕರ್ತರಿಂದ ವಿಷಯ ತಿರುಚುವಿಕೆ, ಅಲ್ಪಸಂಖ್ಯಾತರ ಮೇಲೆ ಅತೀವ ಕಾಳಜಿ ಮತ್ತು ಹಿಂದೂಫೋಬಿಯಾ ಹರಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಉತ್ತಮ ಕಾರ್ಯಗಳನ್ನು ನೋಡಲು ಮತ್ತು ದೇಶದ ರಾಜಕೀಯ ಮತ್ತು ಆರ್ಥಿಕ ಜೀವನವನ್ನು ಸಮರ್ಥವಾಗಿ ಹಿಡಿದಿಡಲು ಬಯಸುವುದಿಲ್ಲ.
ಉನ್ನತ ಮಟ್ಟದ ಪತ್ರಕರ್ತರು ಎಂದು ಕರೆಯಲ್ಪಡುವವರು ತಮ್ಮ ಸರ್ಕಾರ ವಿರೋಧಿ ಮತ್ತು ಹಿಂದೂ ವಿರೋಧಿ ಕಾರ್ಯಸೂಚಿಯನ್ನು ಮುಂದಿಡುವಲ್ಲಿ ನಿರತರಾಗಿದ್ದಾರೆ. ತಮ್ಮ ಅಜೆಂಡಾವನ್ನು ಸರ್ಕಾರ ಅನುಸರಿಸುತ್ತಿಲ್ಲ ಎಂಬ ಕಾರಣದಿಂದಲೇ ಇವರುಗಳು ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಾರೆ. ಇದರ ಫಲವಾಗಿ, ಭಾರತದ ಅನೇಕ ಫೈವ್ ಸ್ಟಾರ್ ಪತ್ರಕರ್ತರು ಮತ್ತು ಸಂಪಾದಕರು ನ್ಯೂಸ್ ರೂಂನಲ್ಲಿ ಕುಳಿತುಕೊಂಡು ಸರ್ಕಾರವನ್ನು ದೂಷಿಸುವಲ್ಲಿ ನಿರತರಾಗಿದ್ದಾರೆ.
ದೇಶದ ಅತ್ಯಂತ ಜನಪ್ರಿಯ ಸುದ್ದಿ ನಿರೂಪಕರಾದ ಅರ್ನವ್ ಗೋಸ್ವಾಮಿ, ಸುಧೀರ್ ಚೌಧರಿ ಮುಂತಾದವರು ಇವರುಗಳ ಅಜೆಂಡಾಗೆ ಇನ್ನೂ ತಲೆ ಬಾಗಿಲ್ಲ, ಅದೇ ಕಾರಣದಿಂದಾಗಿ ಅವರುಗಳನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ರದ್ದುಪಡಿಸಿದ್ದ ಸರ್ಕಾರದ ಕ್ರಮಗಳನ್ನು ಇವರುಗಳು ಪ್ರಶ್ನಿಸಿದ್ದರು. ಇವರಿಗೆ ದೇಶದ ಏಕೀಕರಣದ ಬದಲು ತಮ್ಮ ಅಜೆಂಡಾವೇ ಮೇಲಾಗಿತ್ತು. ಹಲವಾರು ಚಾನೆಲ್ಗಳು ಮೋದಿ ವಿರೋಧಿ ಮತ್ತು ಹಿಂದೂ ವಿರೋಧಿ ರಾಜಕೀಯ ಬಣಗಳಾಗಿ ಪರಿವರ್ತನೆಗೊಂಡಿವೆ.
ಯುಪಿಎ ಯುಗದಲ್ಲಿಯೂ, ಮೋದಿ ವಿರೋಧಿ ಗುಂಪಿನ ಹಲವಾರು ಪತ್ರಕರ್ತರು ವ್ಯಾಪಾರಸ್ಥರಿಗೆ ಮಧ್ಯವರ್ತಿ ಮತ್ತು ಏಜೆಂಟರಾಗಿ ಕಾರ್ಯನಿರ್ವಹಿಸಿದರು. ಕೇಂದ್ರ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಇವರುಗಳು ಹಗರಣಗಳಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಗಳನ್ನು ಕಂಡುಹಿಡಿದಿದೆ. ಅತ್ಯಂತ ಪಕ್ಷಪಾತದ ನೆಟ್ವರ್ಕ್ ಎನ್ಡಿಟಿವಿಯ ಮಾಲೀಕರಾದ ಪ್ರಣಯ್ ರಾಯ್ ಹಗರಣಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಸಿಬಿಐ ಅವರ ಮನೆ ಮತ್ತು ಕಛೇರಿ ಮೇಲೆ ದಾಳಿ ಮಾಡಿತ್ತು. ಅಂದಿನ ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಅವರ ಕುಟುಂಬವನ್ನು ಕೆಣಕುವಲ್ಲಿ ಮತ್ತೊಂದು ಎಡ-ಒಲವುಳ್ಳ ವೆಬ್ಸೈಟ್ ಸಹ ಭಾಗಿಯಾಗಿದೆ. ವೆಬ್ಸೈಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಇದು ಭಾರತ ಮೂಲದ ಪತ್ರಕರ್ತರಿಗೆ ಮಾತ್ರ ಸೀಮಿತವಾಗಿಲ್ಲ. ನ್ಯೂಯಾರ್ಕ್ ಮೂಲದ ಬರಹಗಾರ ಆತಿಶ್ ತಸೀರ್ ಸೇರಿದಂತೆ ಕೆಲವರು ಈ ಹಳದಿ ಪತ್ರಿಕೋದ್ಯಮಕ್ಕೆ ಸೇರಿದ್ದಾರೆ. ಅವರು ಪ್ರತಿ ಕೆಟ್ಟ ಮತ್ತು ಕೆಟ್ಟ ಭಾಷೆಯನ್ನು ಬಳಸುತ್ತಾರೆ.
ಇಂತಹ ಮಾಧ್ಯಮಗಳು ಗಲಭೆಕೋರರು, ಬೆಂಕಿ ಹಚ್ಚುವವರನ್ನು, ದುಷ್ಕರ್ಮಿಗಳನ್ನು ಶಾಂತಿಯುತ ಪ್ರತಿಭಟನಾಕಾರರು ಎಂದು ವೈಭವೀಕರಿಸುತ್ತಿದೆ. ಅವುಗಳು ಮುಸ್ಲಿಮರನ್ನು ಮತ್ತು ವಿದ್ಯಾರ್ಥಿಗಳನ್ನು ಸರ್ಕಾರ ಮತ್ತು ಭಾರತೀಯ ಸಂಸತ್ತು ಅಂಗೀಕರಿಸಿದ ಪೌರತ್ವ ಕಾನೂನುಗಳ ವಿರುದ್ಧ ಪ್ರಚೋದಿಸುತ್ತಿವೆ. ಅವರ ದೃಷ್ಟಿಯಲ್ಲಿ ದಂಗೆಕೋರರು “ಕಾರ್ಯಕರ್ತರು” ಮತ್ತು ರಾಷ್ಟ್ರ ವಿರೋಧಿಗಳು “ದಾರಿ ತಪ್ಪಿದ ಯುವಕರು” ಆಗುತ್ತಾರೆ.
ಈ ಪತ್ರಕರ್ತರು ನಕಲಿ ಸುದ್ದಿಗಳನ್ನು ಕೂಡ ಹರಿ ಬಿಡುತ್ತಾರೆ. ಈ ಗುಂಪಿನ ಪತ್ರಕರ್ತ, ರವೀಶ್ ಕುಮಾರ್ ಪ್ರಾಮಾಣಿಕ ಪತ್ರಕರ್ತರನ್ನು ಲ್ಯಾಪ್ಡಾಗ್ ಮಾಧ್ಯಮ ಅಥವಾ “ಗೋಡಿ ಮಾಧ್ಯಮ” ಎಂದು ಬ್ರಾಂಡ್ ಮಾಡುತ್ತಾನೆ. ಇತ್ತೀಚಿಗೆ ದೆಹಲಿ ದಂಗೆ ವೇಳೆ ಗುಂಡು ಹಾರಿಸಿದ ಅಪರಾಧಿ ಮೊಹಮ್ಮದ್ ಶಾರುಖ್ ಅನ್ನು ಅನುರಾಗ್ ಮಿಶ್ರಾ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ದೆಹಲಿ ಗಲಭೆಯಲ್ಲಿ ಹಿಂದೂಗಳನ್ನು ರಾಕ್ಷಸೀಕರಿಸಿದ್ದಾರೆ.
ದೆಹಲಿ ದಂಗೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎಲ್ಲಾ ತರಹದಲ್ಲಿ ನಿರ್ವಹಣೆ ಮಾಡಿದರೂ ಕೂಡ ಈ ಪತ್ರಕರ್ತರು ಪೊಲೀಸರ ಮೇಲೆ ಕೂರಿಸುವ ಕಾರ್ಯವನ್ನು ಮಾಡಿದರು. ವಿದ್ಯಾರ್ಥಿ ದಂಗೆಕೋರರ ಬಗ್ಗೆ ಸುದ್ದಿ ಪ್ರಸಾರ ಮಾಡಿರುವ ಇವರು, ಇಂಥವರನ್ನು ಪ್ರತಿಭಟನಾಕಾರರು ಎಂದಿದ್ದಾರೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಇದರಿಂದಾಗಿ ಹಲವಾರು ಮಂದಿ ಪೊಲೀಸರು ಗಾಯಗೊಂಡಿದ್ದರು. ಅಸಲಿಗೆ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರ ಹೊರಗಿನ ವ್ಯಕ್ತಿಗಳು ಬಂದು ಸೇರಿ ದುಷ್ಕೃತ್ಯವನ್ನು ನಡೆಸಿದ್ದಾರೆ.
ನಮ್ಮ ದೇಶದಲ್ಲಿ ದಿನದ 24 ಗಂಟೆಯೂ ಸರಕಾರವನ್ನು ಟೀಕಿಸುವಂತಹ ರೆಡಿಮೇಡ್ ಕಮ್ಯೂನಿಸ್ಟ್ ಗ್ಯಾಂಗ್ ಇದೆ. ಇವರುಗಳ ಅಸಲಿ ಮುಖವನ್ನು ಬಯಲು ಮಾಡುವ ಪತ್ರಕರ್ತರು ನ್ಯೂಸ್ ರೂಂ ಹೊರಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಅರ್ನಬ್ ಗೋಸ್ವಾಮಿ ಅವರನ್ನು ವಿಮಾನದಲ್ಲಿ ಕಮ್ಯುನಿಸ್ಟ್ ವ್ಯಕ್ತಿಯೊಬ್ಬ ದೌರ್ಜನ್ಯಕ್ಕೆ ಒಳಪಡಿಸಿದ್ದ. ಈತನನ್ನು ವಿಮಾನಯಾನ ಸಂಸ್ಥೆಗಳು ಬಳಿಕ ನಿಷೇಧಕ್ಕೆ ಒಳಪಡಿಸಿದ್ದವು.
ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇದಕ್ಕಾಗಿ ಬಹುಸಂಖ್ಯಾತ ಸಮುದಾಯ ದೊಡ್ಡಬೆಲೆ ತೆರುತ್ತಿದೆ. ಹಿಂದೂ ವಿರೋಧಿ ದಂಗೆಕೋರರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.
ವಿಶ್ವದಲ್ಲೇ ಪತ್ರಿಕೋದ್ಯಮ ಅತ್ಯಂತ ಅಪ್ರಾಮಾಣಿಕ ಮತ್ತು ಪಕ್ಷಪಾತದ ಧೋರಣೆಯ ಹೊಂದಿದೆ. ಸಂವಿಧಾನದ 370ನೇ ವಿಧಿ ರದ್ದಾಯಿತು ಕಾಶ್ಮೀರವನ್ನು ಭಾರತದೊಂದಿಗೆ ಏಕೀಕರಣಗೊಳಿಸಿದೆ. ಆದರೆ ಕೆಲ ಪತ್ರಕರ್ತರು ಮುಸ್ಲಿಮರನ್ನು ಪ್ರಚೋದಿಸಿ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.