ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಸೋಷಿಯಲ್ ಕಾಫಿಯು ಅದ್ಭುತವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಅರ್ಪಣೆ ಮಾಡಿದೆ. ತ್ರಿವಳಿ ತಲಾಖ್ ಎಂಬ ಅಮಾನವೀಯ ಪದ್ಧತಿಯನ್ನು ನಿಷೇಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ವಿಡಿಯೋ ಇದಾಗಿದೆ. ಮುಸ್ಲಿಂ ಧರ್ಮದಲ್ಲಿ ಇದ್ದ ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯು ಹೆಣ್ಣು ಮಕ್ಕಳಿಗೆ ನರಕ ಸದೃಶ್ಯವಾಗಿತ್ತು. ಮುಸ್ಲಿಂ ಪುರುಷರು ‘ತಲಾಕ್’ ಪದವನ್ನು ಮೂರು ಬಾರಿ ಉಚ್ಛರಿಸುವ ಮೂಲಕ ತಮ್ಮ ಪತ್ನಿಯರಿಗೆ ವಿಚ್ಛೇದನವನ್ನು ನೀಡಲು ಇದು ಅವಕಾಶ ಮಾಡಿಕೊಟ್ಟಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಕಾಯ್ದೆಯನ್ನು ತಂದು ಈ ಅನಿಷ್ಟ ಪದ್ಧತಿಯನ್ನು ನಿಷೇಧಕ್ಕೆ ಒಳಪಡಿಸಿದೆ. ಪ್ರಸ್ತುತ ತ್ರಿವಳಿ ತಲಾಖ್ ನೀಡುವುದನ್ನು ಕಾನೂನು ರೀತಿಯಲ್ಲಿ ಅಪರಾಧವನ್ನಾಗಿಸಲಾಗಿದೆ. ಈ ರೀತಿಯಲ್ಲಿ ವಿಚ್ಛೇಧನ ನೀಡಿದರೆ ಸೆರೆವಾಸವನ್ನು ವಿಧಿಸಲಾಗುತ್ತದೆ.
ಪ್ರಧಾನಿಯವರ ಈ ಕಾರ್ಯಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ವಿಡಿಯೋವನ್ನು ವರುಣ್ ಪಾಂಡ್ಯ ಅವರು ನಿರ್ಮಾಣ ಮಾಡಿದ್ದಾರೆ.
ವಿಡಿಯೋದಲ್ಲಿ ಮುಸ್ಲಿಂ ದಂಪತಿಗಳು ಪದ ಪುಂಜ ಆಟವನ್ನು ಆಡುತ್ತಾರೆ. ಇಲ್ಲಿ ಪ್ರತಿಸಲ ಪತಿ ‘ತಲಾಖ್’ ಎಂದು ಬರೆಯುತ್ತಾನೆ, ಆದರೆ ಪತ್ನಿ ತನ್ನ ಮಕ್ಕಳಾದ ‘ಇಮ್ರಾ, ನಮ್ಮ ಮಗ’, ‘ಸನಾ, ನಮ್ಮ ಮಗಳು’ ಮತ್ತು ‘ಆಯೆಷಾ, ನಮ್ಮ ಮಗಳು’ ಎಂದು ಬರೆಯುತ್ತಾಳೆ. ಆದರೆ ಮೂರು ಬಾರಿ ತಲಾಖ್ ಎಂದು ಅದರಲ್ಲಿ ಬರೆಯುತ್ತಾನೆ. ಇನ್ನೇನು ಗೆದ್ದೆ ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಬಿಜೆಪಿ ಸಂಕೇತವನ್ನು ತಂದಿಡುತ್ತಾನೆ. ಇದು ಪತಿಯ ಮುಖದಲ್ಲಿ ಗಾಬರಿಯನ್ನು ಹುಟ್ಟಿಸುತ್ತದೆ. ಕೊನೆಯಲ್ಲಿ ಮಹಿಳೆ ಮೋದಿಯವರಿಗೆ ಧನ್ಯವಾದಗಳನ್ನು ಹೇಳುತ್ತಾಳೆ.
“ಧನ್ಯವಾದಗಳು ಪ್ರಧಾನಿ ಮೋದಿ. ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸುವ ಮೂಲಕ, ನೀವು ನನ್ನಂತಹ ಲಕ್ಷಾಂತರ ಮುಸ್ಲಿಂ ಮಹಿಳೆಯರನ್ನು ನರಕಯಾತನೆಯ ಜೀವನದಿಂದ ರಕ್ಷಿಸಿದ್ದೀರಿ ಮತ್ತು ಘನತೆಯ ಜೀವನವನ್ನು ನಡೆಸಲು ನಮಗೆ ಅವಕಾಶವನ್ನು ನೀಡಿದ್ದೀರಿ. ನಮ್ಮ ಪ್ರಾರ್ಥನೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ” ಎಂದು ಮಹಿಳೆ ಹೇಳಿದ್ದಾಳೆ.
ತ್ರಿವಳಿ ತಲಾಖ್ ವಿರುದ್ಧದ ಕಾನೂನು ಕಳೆದ ವರ್ಷ ಜುಲೈನಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿತು.
ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು, ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು, ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು, ಪತ್ರದ ಮೂಲಕ ತಲಾಖ್ ಹೇಳುವುದು ಇವೆಲ್ಲವೂ ತ್ರಿವಳಿ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆ.
ಇದೇ ಕಾರಣಕ್ಕೆ ಕೇಂದ್ರದ ಎನ್ಡಿಎ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ತೀರ್ಮಾನಿಸಿ ಹೊಸ ಕಾಯ್ದೆ ಜಾರಿಗೆ ತಂದಿತು. ಇದರಿಂದ ಮುಸ್ಲಿಂ ಮಹಿಳೆಯರ ಘನತೆ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.