ಟೋಕಿಯೊ : ಕಚ್ಛಾ ತೈಲದ ಬೆಲೆ ಭಾರೀ ದೊಡ್ಡ ಮಟ್ಟದಲ್ಲಿ ಕುಸಿದಿದೆ. 1991ರ ಬಳಿಕದ ಅತೀದೊಡ್ಡ ಕುಸಿತ ಇದಾಗಿದೆ. ಸೌದಿ ಅರೇಬಿಯಾ ತನ್ನ ಮಾರಾಟದ ಬೆಲೆಯನ್ನು ಕಡಿತಗೊಳಿಸುವ ಮೂಲಕ ರಷ್ಯಾದೊಂದಿಗೆ ಬೆಲೆ ಸಮರವನ್ನು ಪ್ರಾರಂಭಿಸಿದ ನಂತರ ಮತ್ತು ಕರೋನವೈರಸ್ ಕಾರಣದಿಂದ ಬೇಡಿಕೆ ಕುಂಠಿತಗೊಂಡ ಕಾರಣದಿಂದಾಗಿ ಕಚ್ಚಾ ತೈಲವು ಭಾರೀ ಕಸಿತವನ್ನು ಕಂಡಿದೆ.
ಬ್ರೆಂಟ್ ಕಚ್ಚಾ ತೈಲ ಬೆಲೆಯು $25 14.25 ಅಥವಾ ಶೇ. 31.5 ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ 31.02 ಡಾಲರ್ಗೆ ತಲುಪಿದೆ. ಇದು ಮೊದಲ ಗಲ್ಫ್ ಯುದ್ಧದ ಪ್ರಾರಂಭದಲ್ಲಿ ಅಂದರೆ ಜನವರಿ 17, 1991ರ ನಂತರ ಅತೀದೊಡ್ಡ ಶೇಖಡಾವಾರು ಕುಸಿತವಾಗಿದೆ. ಫೆ ಇದು $ 35.75 ಕ್ಕೆ ವಹಿವಾಟು ನಡೆಸುತ್ತಿದೆ.
ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಕಚ್ಚಾ ಬೆಲೆ 11.28 ಡಾಲರ್ ಅಥವಾ ಶೇ.27.4 ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ 30 ಡಾಲರ್ಗೆ ತಲುಪಿದೆ. ಇದು 1991 ರ ಜನವರಿಯಲ್ಲಿ ನಡೆದ ಮೊದಲ ಕೊಲ್ಲಿ ಯುದ್ಧದ ನಂತರದ ಅತಿದೊಡ್ಡ ಶೇಕಡಾವಾರು ಕುಸಿತವಾಗಿದೆ. ಇದು $ 32.61 ಕ್ಕೆ ವಹಿವಾಟು ನಡೆಸುತ್ತಿದೆ.
ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾಯು ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕನಾದ ರಷ್ಯಾವನ್ನು ಮಣಿಸಲು ಪ್ರಯತ್ನಿಸುತ್ತಿದೆ, ಇದಕ್ಕಾಗಿ ತನ್ನ ಮಾರಾಟ ದರವನ್ನು ಕಡಿಮೆಗೊಳಿಸಿದೆ.
ಪ್ರಸ್ತುತ ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆಯನ್ನು ಕಂಡಿದ್ದು, ರೂ.73.91ರಲ್ಲಿ ವಹಿವಾಟು ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.