ಅಯೋಧ್ಯೆ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ, ಎಲ್ಲರ ಚಿತ್ತ ಕೂಡ ಅಯೋಧ್ಯಾದತ್ತ ನೆಟ್ಟಿದೆ. ಮಧ್ಯಕಾಲೀನ ಯುಗದಲ್ಲಿ ಇಸ್ಲಾಮಿಕ್ ಆಡಳಿತ ಆಕ್ರಮಣಕಾರರಿಂದ ನೆಲಸಮಗೊಂಡು ಮಸೀದಿಯಾಗಿ ಪರಿವರ್ತಿಸಲ್ಪಟ್ಟ ಜಾಗದಲ್ಲಿ ಈ ಮತ್ತೆ ಪ್ರಾಚೀನ ಹಿಂದೂ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯದ ನಿರ್ಮಾಣವನ್ನು ಮಾಡುವುದು ಹಿಂದೂ ಭಕ್ತರಿಗೆ ಅತ್ಯಂತ ನಿರ್ಣಾಯಕವಾಗಿದೆ. ಹಿಂದೆ ಅನೇಕ ದೇಗಲಗಳನ್ನು ಒಡೆದು ಮಸೀದಿಯಾಗಿ ನಿರ್ಮಾಣ ಮಾಡಲಾಗಿತ್ತು. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಂತಹ ಇತರ ಪ್ರಾಚೀನ ದೇವಾಲಯದ ಜಾಗದಲ್ಲಿ ಮಸೀದಿ ಅಥವಾ ಮಥುರಾದ ಕೃಷ್ಣ ದೇವಸ್ಥಾನದಲ್ಲಿ ಈದ್ಗಾ ಮಸೀದಿಯನ್ನು ನಿರ್ಮಾಣ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಇದೀಗ ಇಲ್ಲೂ ಮಂದಿರ ನಿರ್ಮಾಣವಾಗಬೇಕೆಂಬ ಬೇಡಿಕೆ ಗಟ್ಟಿಯಾಗಿ ಕೇಳಿ ಬರುತ್ತಿದೆ.
ರಾಮ ಜನ್ಮಭೂಮಿ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ರಾಜ್ಯಸಭಾ ಸಂಸದ, ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಈಗ ಕಾಶಿ ವಿಶ್ವನಾಥ ದೇವಾಲಯವನ್ನು ಪುನಃಸ್ಥಾಪಿಸುವ ಪ್ರಯತ್ನಗಳಲ್ಲಿ ಮುಸ್ಲಿಂ ಸಮುದಾಯವೂ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ಮಂದಿರದ ವಿಮೋಚನೆ ಮತ್ತು ಪುನಃಸ್ಥಾಪನೆ ಹಿಂದೂ ನವೋದಯದ ಒಂದು ಮೂಲಭೂತ ಭಾಗವಾಗಿದೆ. ಮುಸ್ಲಿಂ ಸಮುದಾಯವು ಈ ಬಗ್ಗೆ ಹಿಂದೂಗಳಿಗೆ ಸಹಕಾರವನ್ನು ನೀಡುತ್ತದೆ ಮತ್ತು ದೇವಾಲಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಕಾಶಿ ವಿಶ್ವನಾಥ ದೇವಾಲಯವು ದೇಶಾದ್ಯಂತ ಹಿಂದೂ ಭಕ್ತರಿಗೆ ಅತ್ಯಂತ ಪ್ರಮುಖ ತಾಣವಾಗಿದೆ. ಹಿಂದೂಗಳ ಆರಾಧ್ಯ ದೇವರಾದ ಕಾಶಿ ವಿಶ್ವನಾಥ ಇಲ್ಲಿ ನೆಲೆಸಿದ್ದಾನೆ. 1669 ರಲ್ಲಿ ಮೊಘಲ್ ಸಾಮ್ರಾಜ್ಯದ ಅನಾಗರಿಕ ರಾಜ ಔರಂಗಜೇಬನು ಈ ಸ್ಥಳದಲ್ಲಿದ್ದ ಪ್ರಾಚೀನ ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ನಂತರ ಈ ಸ್ಥಳದಲ್ಲಿ ಜ್ಞಾನವಪಿ ಮಸೀದಿ ನಿರ್ಮಿಸಿದ ಎಂದು ಹೇಳಲಾಗಿದೆ.
ಕಾಶಿಯ ಈ ತಾಣವು ಸಾಮಾನ್ಯವಾಗಿ ಹಿಂದೂ ಭಕ್ತರಿಗೆ ಮತ್ತು ವಿಶೇಷವಾಗಿ ಶಿವ ಭಕ್ತರಿಗೆ ಅಪಾರ ಪ್ರಾಮುಖ್ಯತೆಯ ತಾಣವಾಗಿದ್ದು, ಇದು 12 ‘ಜ್ಯೋತಿರ್ಲಿಂಗ’ಗಳ ತಾಣಗಳಲ್ಲಿ ಒಂದಾಗಿದೆ.
ಇಂದು, ಕಾಶಿ ವಿಶ್ವನಾಥ ದೇವಸ್ಥಾನವಿದೆ ಮತ್ತು ಅದರ ಪಕ್ಕದಲ್ಲಿ ಗ್ಯಾನವಪಿ ಮಸೀದಿ ಇದೆ, ಆದರೆ ಹಿಂದೂ ನಂಬಿಕೆಯ ಪ್ರಕಾರ, ಮೂಲ ಜ್ಯೋತಿರ್ಲಿಂಗವು ಜ್ಞಾನವಪಿ ಮಸೀದಿಯಲ್ಲಿದೆ ಎಂದು ಹೇಳಲಾಗಿದೆ.
ಕಳೆದ ತಿಂಗಳು, ಕಾಶಿ ವಿಶ್ವನಾಥ ದೇವಾಲಯದ ಪುನಃಸ್ಥಾಪನೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಪ್ರಗತಿಯಾಗಿದೆ, ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಪಿ ಮಸೀದಿ ವಿವಾದದ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.