ಮಾರಣಾಂತಿಕ ವೈರಸ್ ಕೊರೋನವೈರಸ್ ಜಗತ್ತಿನಾದ್ಯಂತ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಈಗಾಗಲೇ ಭಾರತದಲ್ಲೂ 28 ಪ್ರಕರಣಗಳ ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹೇಳಿದ್ದಾರೆ. ಭಾರತಕ್ಕೆ ಆಗಮಿಸಿರುವ ಪ್ರವಾಸಿಗರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಕೊರೋನವೈರಸ್ ಕಾರಣದಿಂದಾಗಿ ಸಾವಿನ ಸಂಖ್ಯೆ 67 ದೇಶಗಳಲ್ಲಿ 3,056 ಕ್ಕೆ ಏರಿದೆ, 89,527 COVID-19 ಪ್ರಕರಣಗಳು ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಜನವರಿಯಲ್ಲಿ ಈ ಸೋಂಕಿನ ಅನ್ನು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಘೋಷಿಸಿತು. ಕರೋನವೈರಸ್ನಿಂದ ಉಂಟಾಗುವ ಉಸಿರಾಟದ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಹೀಗಾಗಿ, ವೈರಸ್ಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು ಅನಾರೋಗ್ಯವನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗವಾಗಿದೆ. ಬಹುಶಃ, ವೈಯಕ್ತಿಕ ನೈರ್ಮಲ್ಯವು ಕೂಡ ಉತ್ತಮ ಆರೋಗ್ಯದ ಮೊದಲ ಮತ್ತು ಪ್ರಮುಖ ಹಂತವಾಗಿದೆ.
ವೈರಸ್ ಹೇಗೆ ಹರಡುತ್ತದೆ ಎಂಬುದರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದುದು ಅವಶ್ಯಕವಾಗಿದೆ. ಪ್ರಸ್ತುತ ತಿಳಿದಿರುವಂತೆ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ, ಮುಖ್ಯವಾಗಿ ಶ್ವಾಸಕೋಶದಿಂದ ಹೊರಬರುವ ದ್ರವಗಳಿಂದ, ಸೋಂಕಿತ ವ್ಯಕ್ತಿ ಅಥವಾ ವಸ್ತುಗಳ ಸಂಪರ್ಕದ ಮೂಲಕ. ಕೆಮ್ಮು ಅಥವಾ ಸೀನುವಾಗ ಸೋಂಕಿತ ವ್ಯಕ್ತಿಯಿಂದ ಹೊರಬರುವ ದ್ರವದ ಮೂಲಕ COVID-19 ಹೆಚ್ಚಾಗಿ ಹರಡುತ್ತದೆ.
ಸೋಂಕಿತ ವ್ಯಕ್ತಿಯಲ್ಲಿ ಯಾವುದೇ ಗುಣಲಕ್ಷಣಗಳು ಕಾಣಿಸಿಕೊಳ್ಳದ ಸಂದರ್ಭದಲ್ಲೂ ಈ ವೈರಸ್ ಆತನಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ನಾವು ಕೆಲವೊಂದು ಸರಳ ಪದ್ಧತಿಗಳನ್ನು ರೂಢಿಸಿಕೊಳ್ಳುವ ಮೂಲಕ ಈ ಮಾರಣಾಂತಿಕ ಕಾಯಿಲೆಯಿಂದ ನಮ್ಮನ್ನು ಮತ್ತು ಸಮಾಜವನ್ನು ಕಾಪಾಡಿಕೊಳ್ಳಬಹುದಾಗಿದೆ.
ಅವುಗಳೆಂದರೆ,
ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು
ಹಸ್ತಲಾಘವ ಮಾಡುವುದನ್ನು ತಪ್ಪಿಸಿಕೊಳ್ಳುವುದು
ನಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ಕೈತೊಳೆಯದೆ ಮುಟ್ಟಿಕೊಳ್ಳುವುದು
ನೀರು ಮತ್ತು ಸೋಪಿನ ಮೂಲಕ ಪ್ರತಿ 20 ನಿಮಿಷಗಳಿಗೊಮ್ಮೆ ಕೈ ತೊಳೆದುಕೊಳ್ಳುವುದು. ಅದರಲ್ಲೂ ಶೌಚ ಮಾಡಿದ ಬಳಿಕ, ಆಹಾರ ಸೇವನೆಗೂ ಮುನ್ನ ಕೈ ತೊಳೆಯುವುದು ಅವಶ್ಯಕ
ನೀರು ಮತ್ತು ಸೋಪು ಎಲ್ಲಾ ಸಮಯದಲ್ಲೂ ಲಭ್ಯವಿಲ್ಲದ ಪಕ್ಷದಲ್ಲಿ ಶೇ.60ರಷ್ಟು ಅಲ್ಕೋಹಾಲ್ ಹೊಂದಿದ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಬಳಸುವುದು ಉತ್ತಮ.
ಸೀನುವಾಗ ಮತ್ತು ಕೆಮ್ಮುವಾಗ ಶುಚಿಯಾದ ಬಟ್ಟೆಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಅವಶ್ಯಕ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಸೀನುವ ಮತ್ತು ಕೆಮ್ಮುವ ವ್ಯಕ್ತಿಯಿಂದ ನಾವು 1 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು
ಅನೇಕರು ಪದೇ ಪದೇ ಮುಟ್ಟುವಂತಹ ವಸ್ತುಗಳನ್ನು ಆಗಾಗ ಶುಚಿಗೊಳಿಸುವುದು ಉತ್ತಮ
ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು
ಪ್ರಾಣಿಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಕು
ಬೇಯಿಸದ ಮಾಂಸಗಳನ್ನು ಸೇವನೆ ಮಾಡಬಾರದು
ಜ್ವರ ಅಥವಾ ಶೀತವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಸದ್ಯದ ಮಟ್ಟಿಗೆ ಆದಷ್ಟು ಸಭೆ ಸಮಾರಂಭಗಳನ್ನು ನಿರ್ಲಕ್ಷ್ಯ ಮಾಡುವುದು ಒಳಿತು
ಕಾರ್ಯಸ್ಥಳಲ್ಲಿ ನೈರ್ಮಲ್ಯ ಕಾಪಾಡಿ
ಕಛೇರಿ ಡೆಸ್ಕ್, ಟೇಬಲ್, ಟೆಲಿಫೋನ್, ಕೀಬೋರ್ಡ್ಗಳನ್ನು ಶುಚಿಗೊಳಿಸುತ್ತಾ ಇರಿ.
ಕೈ ತೊಳೆಯುವ ಸೂಚನೆ ನೀಡುವ ಪೋಸ್ಟರ್ ಅಂಟಿಸಿ
ಹ್ಯಾಂಡ್ ಸ್ಯಾನಿಟೈಸರ್ಗಳನ್ನು ತಂದಿಟ್ಟು ನಿರಂತರವಾಗಿ ಬಳಸಿಕೊಳ್ಳುತ್ತಿರಿ
ಶೀತ ಅಥವಾ ಮೂಗು ಸೋರುವಿಕೆಯ ಸಂದರ್ಭದಲ್ಲಿ ಮಾಸ್ಕ್ ಧರಿಸಿ
ಮೇಲಿನ ಮುಂಜಾಗೃತ ಕ್ರಮಗಳು ಕೇವಲ ಕೊರೋನವೈರಸ್ ಮಾತ್ರವಲ್ಲ, ಇತರ ಯಾವುದೇ ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಸೋಂಕನ್ನು ತಡೆಗಟ್ಟುತ್ತದೆ. ಹೀಗಾಗಿ ಇವುಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಬೇಕಾದುದು ಅತ್ಯಗತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.